ಬೆಂಗಳೂರು: ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ನಿರ್ಬಂಧ ಹೇರಿರುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲಾರಾಗಿದ್ದಾರೆ. ಬಿಜೆಪಿ ಕಾಂಗ್ರೆಸ್ ವಿರುದ್ಧ ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂಮರ ವ್ಯಾಪಾರಕ್ಕೆ ನಿಷೇಧ ಹೇರುವ ಮತ್ತು ಹಿಂದೂಗಳ ಅಂಗಡಿಗೆ ಮಾತ್ರ ಹೋಗುವ ವಾಟ್ಸಾಪ್ ಸಂದೇಶ ಓದಿ ಕೆಂಡಾಮಂಡಲಾರಾಗಿದ್ದಾರೆ. ಇಂಥ ಪರಿಸ್ಥಿತಿಗೆ ಬಿಜೆಪಿ ಕಾಂಗ್ರೆಸ್ ಪಕ್ಷವೇ ಕಾರಣ ಎಂದಿದ್ದಾರೆ.
ಈ ಸಂದೇಶವನ್ನ ಪ್ರತಿ ಹತ್ತು ಹಿಂದೂಗಳಿಗೆ ಹಂಚಿ
ಹೊಟ್ಟೆಗೆ ತಿನ್ನೋಕೆ ಏನು ಕೊಡಬೇಡಿ. ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಇದನ್ನೆರ ಸ್ಮರಿಸಿಕೊಂಡು ಕುಳಿತುಕೊಳ್ಳಿ. ಅಲ್ಲ ರೀ ಹಿಂದೂ ದೇವಸ್ಥಾನಕ್ಕೆ ದಲಿತರನ್ನ ಪೂಜೆ ಮಾಡೋಕೆ ಬಿಡ್ತೀರಾ. ದೇವಸ್ಥಾನ ಕಟ್ಟೋದು ಓಬಿಸಿ, ದಲಿತರು. ಆದ್ರೆ ಆ ದೇವಸ್ಥಾನಗಳ ಒಳಗೆ ಕೂತು ಲಾಭ ಮಾಡಿಕೊಳ್ಳೋದು ನೀವು. ಮಜಾ ಮಾಡೋದು ನೀವೂ. ನಾನು ಇಲ್ಲಿಯವರೆಗೂ ಇಷ್ಟು ಕಠಿಣವಾಗಿ ಮಾತನಾಡಿಲ್ಲ. ರಾಜ್ಯವನ್ನ ಯಾವ ಸ್ಥಿತುಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಜವಬ್ದಾರಿ ಸ್ಥಾನದಲ್ಲಿದ್ದು ಇದರ ಬಗ್ಗೆ ಧ್ವನಿ ಎತ್ತದೆ ಇದ್ದರೆ ಸಂವಿಧಾನಕ್ಕೆ ಅಪಮಾನ ಮಾಡಿದಂತೆ.
ನಾನು ಚರ್ಚೆಯಲ್ಲಿ ಭಾಗವಹಿಸಬಾರದು ಅಂತಿದ್ದೆ. ಆದ್ರೆ ಇದೆಲ್ಲವಙಲನ್ನು ನೋಡಿದ್ರೆ ಚರ್ಚೆ ಮಾಡಲೆರ ಬೇಕು. ಇದೇನು ಸರ್ಕಾರವಾ. ಇದನ್ನ ಸರ್ಕಾರ ಅಂತ ಕರಿತೀರಾ. ನಿಮ್ಮ ಜವಬ್ದಾರಿ ಏನು..? ಜನರನ್ನ ರಕ್ಷಣೆ ಮಾಡುವುದು ನಿಮ್ಮ ಜವಬ್ದಾರಿ ಆದ್ರೆ ಉತ್ತರವೇ ಇಲ್ಲ. ಈ ರೀತಿ ಮಾಡಿದವನನ್ನ ಅರೆಸ್ಟ್ ಮಾಡಬೇಕು ಅಲ್ವಾ. ಸಿಎಂ ಮೇಲೆ ಕಮೆಂಟ್ ಮಾಡಿದ ಅಂತ ಅರೆಸ್ಟ್ ಮಾಡಿದ್ದೀರಿ. ಆದ್ರೆ ಹೀಗೆ ಸಮಾಜದ ಸಾಮರಸ್ಯ ಹಾಳು ಮಾಡುತ್ತಿರುವವನನ್ನ ಏನು ಮಾಡಿದ್ದೀರಿ ಎಂದು ಕುಮಾರಸ್ವಾಮಿ ಖಡಕ್ ಆಗಿ ಕೇಳಿದ್ದಾರೆ.