ಮೈಸೂರು: ಹೆಚ್ಚು ಕಡಿಮೆಯಾಗಿದ್ದರೆ ಆ ಗುಂಪಿನವರು ಇಬ್ಬರು ಪೊಲೀಸಿನವರನ್ನ ಬಲಿ ಪಡೆದುಕೊಳ್ಳಲು ಹೊರಟಿದ್ದರು. ಆ ಗುಂಪಿಗೆ ಪ್ರೇರಪಣೆ ಕೊಟ್ಟವರು ಯಾರು..? ಸಡನ್ ಆಗಿ ಆ ಗುಂಪು ಅಲ್ಲಿಗೆ ಬರಲು ಕಾರಣ ಏನು..? ವಾಟ್ಸಾಪ್ ನಲ್ಲಿ ಅದ್ಯಾರೋ ಮಾಡಿದ ಪೋಸ್ಟ್ ಮೂರ್ನಾಲ್ಕು ಗಂಟೆಯೊಳಗೆ ಆ ರೀತಿ ಗುಂಪು ಸೇರಿದ್ದಾರೆ. ಅವನ್ಯಾರೋ ಮೌಲಿನೇ ಅಲ್ಲ, ಯಾರೋ ಲಾರಿ ಮಾಲೀಕ ಅಂತ ಬೇರೆ ಹೇಳ್ತಾ ಇದ್ದಾರೆ. ಅವನ್ಯಾರೋ ಪೊಲೀಸ್ ಜೀಪಿನ ಮೇಲೆ ನಿಂತು ಭಾಷಣ ಮಾಡುವುದಕ್ಕೆ ಬಿಟ್ಟಿದ್ದೀರಿ. ಅವನನ್ನು ಅರೆಸ್ಟ್ ಮಾಡುವುದನ್ನು ಬಿಟ್ಟು ಎಲ್ಲಿ ಕಳುಹಿಸಿದ್ದೀರಿ..? ಯಾರು ಅವನು..?.
ಒಂದು ಕಡೆ ಸರ್ಕಾರದ ನಿರ್ಲಕ್ಷ್ಯ. ಮತ್ತೊಂದು ಕಡೆ ಇಂಥ ಸಮಯದಲ್ಲಿ ಕಾಂಗ್ರೆಸ್ ನವರು ಪೆಟ್ರೋಲ್ ಸುರಿತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಅವರು ಬೆಂಕಿ ಹಚ್ಚಿದರೆ ಕಾಂಗ್ರೆಸ್ ನವರು ಪೆಟ್ರೋಲ್ ಸುರಿಯುತ್ತಾರೆ ಚೆನ್ನಾಗಿದೆ. ಇದನ್ನು ನಾಡಿನ ಜನತೆಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ. ದಯವಿಟ್ಟು ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ತಾವುಗಳು ತಮ್ಮ ತೀರ್ಮಾನವನ್ನು ಮಾಡಿಕೊಳ್ಳದೆ ಇದ್ದರೆ, ನಿಮ್ಮ ನಿಲುವುಗಳನ್ನು ತಾಳದೆ ಇದ್ದರೆ, ಅಶಾಂತಿ ವಾತಾವರಣಕ್ಕೆ ಅವಕಾಶ ಕೊಡದೆ ಇರುವಂತ ತೀರ್ಮಾನಕ್ಜೆ ಬರದೆ ಇದ್ದರೆ. ಈ ನಾಡು, ಸರ್ವಜನಾಂಗದ ಶಾಂತಿಯ ತೋಟಕ್ಕೆ ಮುಂದೆ ಯಾವ ಅನಾಹುತ ತರುತ್ತಾರೆ ಎಂಬುದನ್ನು ಪ್ರತಿದಿನ ನೋಡುತ್ತಿದ್ದೇವೆ. ನೀವೂ ಕೂಡ ಇದಕ್ಕೆ ಅವಕಾಶ ಕೊಡಬೇಡಿ.
ಅವತ್ತು ಆ ಕಲ್ಲಪ ಹಂಡಿಭಾಗ್ ನನ್ನ ಜಾತಿಯವನಲ್ಲ, ನನ್ನ ಏರಿಯಾದವನಲ್ಲ. ವಿದೇಶದಲ್ಲೆ ಇದ್ದೋನು ಅವತ್ತು ಬಂದು ಅವನ ಸ್ಥಿತಿ ನೋಡಿ ಸರ್ಕಾರದ ಗಮನ ಸೆಳೆದೆ. ಆಗ ಸರ್ಕಾರದ ಕಣ್ಣು ತೆರೆಸಿದೆ. ಅದು ಸಿದ್ದರಾಮಯ್ಯ ಅವರ ಆಡಳಿತದ ವೈಪಲ್ಯತೆ ಅಲ್ಲವೆ ? ಒಬ್ಬ ಪ್ರಾಮಾಣಿಕ ಅಧಿಕಾರಿ ಅಲ್ಲಿ ನಡೆದಂತ ಕ್ರಿಕೆಟ್ ಬೆಟ್ಟಿಂಗ್ ದಂಧೆ, ಮರಳು ದಂಧೆ ಯಾರ್ಯಾರು ಮಾಡ್ತಾ ಇದ್ರು. ಅದೆಲ್ಲದ್ದಕ್ಕು ಬಿಜೆಪಿಗರೇ ಕಾರಣಕರ್ತರು. ಆ ಕಲ್ಲಪ್ಪ ಸಾಯಬೇಕಾದರೆ ಅಲ್ಲಿ ಏನು ನಡೀತು, ಯಾವ್ಯಾವ ಶಾಸಕರು ನಡೆಸಿದರು. ಕಣ್ಣ ಮುಂದೆ ಇತ್ತು ಇಡೀ ಜಿಲ್ಲೆಗೆ ಗೊತ್ತಿತ್ತು ಎಂದು ಹರಿಹಾಯ್ದಿದ್ದಾ