ಅವರು ಕೊಟ್ಟ ಕಿರುಕುಳದ ನಡುವೆ ರೈತರ ಸಾಲ‌ ಮನ್ನಾ ಮಾಡಿದೆ : ಕುಮಾರಸ್ವಾಮಿ

suddionenews
1 Min Read

 

ಶಿವಮೊಗ್ಗ: ಶಿವಮೊಗ್ಗದ ನನ್ನ ತಂದೆ ತಾಯಂದಿರಿಗೆ ಕೇಳುತ್ತೇನೆ. 2006ನೇ ಇಸವಿಗಿಂತ ಮುಂಚೆ ಬಿಜೆಪಿ ನಾಯಕರ ಆಸ್ತಿ ಎಷ್ಟಿತ್ತು. 2006 ನೇ ಇಸವಿಯಲ್ಲಿ ನನ್ನ ಸರ್ಕಾರವನ್ನು ಅವರ ಜೊತೆ ಮಾಡುದ್ನಲ್ಲ ವಿಧಿಯಿಲ್ಲದೆ. ಅವತ್ತು ನಮ್ಮ ಶಾಸಕರು ಚುನಾವಣೆಗೆ ಹೋಗಲು ಭಯ ಬಿದ್ದು, ಒಂದು ಪರ್ಯಾಯ ಸರ್ಕಾರ ಮಾಡಿ ಅಂತ ಒತ್ತಡ ಹಾಕಿ, ಅವತ್ತು ಸರ್ಕಾರ ಮಾಡಿದ ಮೇಲೆ ಶಿವಮೊಗ್ಗ ನಗರಕ್ಕೆ ಹೋದರೆ ಯಾರ್ಯಾರ ಆಸ್ತಿ ಎಷ್ಟಿದೆ ಎಂಬುದನ್ನು ನೋಡಿದ್ದೀರಾ. ಕಣ್ಣಿಗೆ ಕಾಣುತ್ತೆ ನಿಮಗೆ. ಆದರೂ ನೀವೂ ಅವರಿಗೆ ಮತ ಕೊಡುತ್ತೀರಿ.

ನಾವೂ ಒಂದು ಫಲಾಪೇಕ್ಷೆ ಇಲ್ಲದೆ ನನ್ನ ರೈತನ ಬದುಕು, ನಮ್ಮ ರಾಜ್ಯದ ಮಹಿಳೆಯರ ಕಷ್ಟಗಳಿಗೆ ಯಾವ ರೀತಿ ನಾನು ಸರ್ಕಾರದಲ್ಲಿ ಕಾರ್ಯಕ್ರಮ ಕೊಟ್ಟಿದ್ದೇನೆ. 200 ರೂಪಾಯಿ ಇದ್ದಂತ ಮಾಸಾಶನ, ವಿಧವೆಯರಿಗೆ, ಅಂಗವಿಕಲರಿಗೆ ಅಂತಿಮವಾಗಿ ಅದನ್ನು 800 ರೂಪಾಯಿಗೆ ಏರಿಕೆ ಮಾಡಿದರು. ಮೊನ್ನೆ ಮುಖ್ಯಮಂತ್ರಿಯಾಗಿದ್ದಾಗ ಒಂದು ಸಾವಿರಕ್ಕೆ ಏರಿಕೆ ಮಾಡಿದೆ. ಇದರಿಂದ ನನಗೆ ಕಮಿಷನ್ ಬರುವಂತ ಕಾರ್ಯಕ್ರಮವ ಅದು. ದಯವಿಟ್ಟು ಯೊಇಚಿಸಿ. ಯಾವುದಕ್ಕೆ ತೀರ್ಮಾನ ಮಾಡಬೇಕೆಂಬುದನ್ನು.

ನಿಮ್ಮೆಲ್ಲರನ್ನು ಕೇಳ್ತೀನಿ. ಕಳೆದ ಚುನಾವಣೆಯಲ್ಲಿ ಈ ನಾಡಿನ ಜನತೆಯ ವಿಶೇಷವಾಗಿ ರೈತರ ಆತ್ಮಹತ್ಯೆಯ ಪ್ರಕರಣಗಳ ಮುಖಾಂತರವಾಗಿ ಆ ರೈತರ ಕುಟುಂಬದ ತಾಯಂದಿರು, ಸಹೋದರಿಯರು ವಿಧವೆಯರಾಗಿ ಅನಾಥರಾಗುವ ಪರಿಸ್ಥಿತಿ ಗಮನಿಸಿದ್ದೇವು. ಅದರ ಹಿನ್ನಲೆಯಲ್ಲಿ 2018 ರ ಚುನಾವಣೆಯಲ್ಲಿ ನಾಡಿನ ಜನತೆಗೆ ಮಾತು ಕೊಟ್ಟಿದ್ದೆ. ಜನತಾ ದಳವನ್ನು ಅಧಿಕಾರಕ್ಜೆ ತಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತ ಮಾತನ್ನು ಹೇಳಿದ್ದೆ. ಆದ್ರೆ ಕಾಂಗ್ರೆಸ್ – ಬಿಜೆಪಿಗರು ಸಾಲಮನ್ನಾ ಮಾಡೋಕೆ ಹಣ ಎಲ್ಲಿದೆ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ಒಂದು ಪಕ್ಷದ ಜೊತೆಗೆ ಅಧಿಕಾರ ಹಿಡಿದೆ. ರೈತರ ಸಾಲಮನ್ನಾ ಮಾಡಲು ಆಡಳಿತ ನಡೆಸಿದೆ. ಆ ಸಮಯದಲ್ಲಿ 25 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಈ ಸಲ ಅಧಿಕಾರಕ್ಕೆ ತಂದರೆ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *