ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಅವರು ನೀಡಿದ್ದ ಹೇಳಿಕೆ ಸಾಕಷ್ಟು ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಅದಾದ ಬಳಿಕ ಹಂಸಲೇಖ ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು.
ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಗಂಗರಾಜು ಎಂಬುವವರು ಹಂಸಲೇಖ ವಿರುದ್ಧ ಹೈಕೋರ್ಟ್ ಗೆ ರಿಟ್ ಅರ್ಜಿ ದಾಖಲಿಸಿದ್ದರು. ಪ್ರಕರಣ ರದ್ದುಪಡಿಸಲು ಮನವಿ ಮಾಡಿದ್ದರು. ವಕೀಲ ಕಾಶೀನಾಥ್, ಸಿಎಸ್ ದ್ವಾರಕಾನಾಥ್ ವಾದಿಸಿದ್ದರು.
ಡಾ. ಮುರಳೀಧರ್ ದೂರಿನಡಿ ದಾಖಲಾಗಿದ್ದ ಕೇಸ್ ಗೆ ತಡೆ ನೀಡಲಾಗಿದೆ. ಈ ದೂರಿನಡಿಯಲ್ಲಿ ಹಂಸಲೇಖ ರಿಗೆ ನೋಟಿಸ್ ಜಾರಿಯಾಗಿತ್ತು. ಎಸ್.ಎನ್. ಅರವಿಂದ ದೂರಿಗೆ ಸಂಬಂಧಿಸಿದಂತೆಯೂ ನೋಟಿಸ್
ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ ನೀಡಿದೆ.