ಬೆಂಗಳೂರು : ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಾ ಇರುವುದು ಹಾಸನ ಕ್ಷೇತ್ರ. ಜೆಡಿಎಸ್ ಕುಟುಂಬಸ್ಥರಲ್ಲಿಯೇ ಹಾಸನ ಟಿಕೆಟ್ ಕಗ್ಗಂಟಾಗಿದೆ. ಯಾಕಂದ್ರೆ ಭವಾನಿ ರೇವಣ್ಣ ಹಾಸನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೊದಲೇ ಟಿಕೆಟ್ ಅನೌನ್ಸ್ ಅವರೇ ಮಾಡಿಕೊಂಡಿದ್ದರು. ಬಳಿಕ ಕುಮಾರಸ್ವಾಮಿ ಹೇಳಿಕೆಗಳು ಅವರನ್ನು ಮತ್ತಷ್ಟು ಹಠಕ್ಕೆ ಬೀಳುವಂತೆ ಮಾಡಿತ್ತು. ಇದೀಗ ಮತ್ತೆ ಭವಾನಿ ರೇವಣ್ಣ ಅವರ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

“ಯಾವುದೋ ಒಂದು ಪತ್ರಿಕೆಯಲ್ಲಿ ಬಂದಿದೆ. ಆ ರೀತಿಯ ಬ್ಲಾಕ್ ಮೇಲ್ ಗೆಲ್ಲಾ ನಾನು ಬಗ್ಗುವುದಿಲ್ಲ. ಇವೆಲ್ಲ ನನ್ನ ಬಳಿ ನಡೆಯಲ್ಲ. ನೀವೂ ದೇವೇಗೌಡರನ್ನು ಎಮೋಷನಲ್ ಆಗಿ ಬ್ಲಾಕ್ ಮೇಲ್ ಮಾಡಬಹುದು, ನನ್ನನ್ನು ಅಲ್ಲ” ಎಂದು ಟಿಕೆಟ್ ಸಿಗದೆ ಹೋದರೆ ಭವಾನಿ ರೇವಣ್ಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಈಗಾಗಲೇ ಹೇಳಿದ್ದೇನೆ ಹಾಸನ ಟಿಕೆಟ್ ಕಾರ್ಯಕರ್ತನಿಗೆ ಎಂದು. ಇದರಲ್ಲಿ ಯಾವುದೇ ಸುಳ್ಳು ಇಲ್ಲ. ಇಷ್ಟು ವರ್ಷ ನನ್ನ ಕುಟುಂಬದ ಸಮಸ್ಯೆಯನ್ನು ಬಗೆಹರಿಸಿಕೊಂಡು ಬಂದಿದ್ದೇನೆ. ಈಗಲೂ ಬಗೆಹರಿಸುತ್ತೇನೆ ಎಂದು ತಿಳಿಸಿದ್ದಾರೆ.
ಭವಾನಿ ರೇವಣ್ಣ ಈ ಬಾರಿ ಚುನಾವಣೆಗೆ ನಿಲ್ಲಲೇಬೇಕೆಂದು ಹಠ ಹಿಡಿದಿದ್ದು, ಈಗ ದೇವೇಗೌಡರ ಅವರ ಅಂಗಳದಲ್ಲಿ ನಿರ್ಧಾರವಾಗಬೇಕಿದೆ. ಸೂರಜ್ ರೇವಣ್ಣ ಕೂಡ ಅಮ್ಮನ ಟಿಕೆಟ್ ಗಾಗಿ ಹೋರಾಟ ನಡೆಸುತ್ತಿದ್ದಾರೆ.


