ಚಿಕ್ಕಮಗಳೂರು: ಜೆಡಿಎಸ್ ನಲ್ಲಿ ಹಾಸನ ಟಿಕೆಟ್ ವಿಚಾರವೇ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕುಟಂಬದವರ ಒಳಗೆ ಕಲಹ ಶುರುವಾಗಿತ್ತು. ಬಿಜೆಪಿ ನಾಯಕರಿಗೂ ಜೆಡಿಎಸ್ ಬಗ್ಗೆ ವ್ಯಂಗ್ಯವಾಡಲು ಒಂದು ಅಸ್ತ್ರವೂ ಆಗಿತ್ತು. ಬಳಿಕ ದೇವೇಗೌಡರು ಎಂಟ್ರಿಯಾಗಿ ಸ್ವಲ್ಪ ತಣ್ಣಗೆ ಮಾಡಿದ್ದಾರೆ. ಆದ್ರೆ ಇನ್ನು ಕೂಡ ಬೂದಿ ಮುಚ್ಚಿದ ಕೆಂಡಂದಂತೆಯೇ ಇದೆ ಹಾಸನ ಜೆಡಿಎಸ್ ಟಿಕೆಟ್ ವಿಚಾರ.

ಇಂದು ಚಿಕ್ಕಮಗಳೂರಿನಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಟಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಜೆಟ್ ಬಗ್ಗೆ ನಾಳೆ ನಿರ್ಧಾರವಾಗುತ್ತದೆ. ನಾಳೆ ಹಾಸನ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ. ಸಭೆಯಲ್ಲಿ ಕಾರ್ಯಕರ್ತರ ಸಲಹೆ ಪಡೆದು ನಿರ್ಧಾರ ಮಾಡುತ್ತೇವೆ.

ಕಾರ್ಯಕರ್ತರ ಅಭಿಮಾನಕ್ಕೆ ಚ್ಯುತಿಯಾಗದಂತೆ ನಿರ್ಧಾರ ಮಾಡುತ್ತೇವೆ. ಎಲ್ಲಾ ಕಾರ್ಯಕರ್ತರು ಕೂಡ ನಮಗೆ ಕುಟುಂಬವಿದ್ದಂತೆ. ದೇವೇಗೌಡರ ಆಸೆ ಕಮರಿ ಹೋಗದಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಂದು ಹೇಳಿದ್ದ ಹೇಳಿಕೆಗೆ ಇಂದು ಕೂಡ ನಾನು ಬದ್ಧನಾಗಿದ್ದೇನೆ. ಈ ಸಭೆಗೆ ರೇವಣ್ಣ ಹಾಗೂ ಸೂರಜ್ ಗೆ ಆಹ್ವಾನವಿಲ್ಲ ಎಂದಿದ್ದಾರೆ.

