9ನೇ ತರಗತಿ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ..!

suddionenews
1 Min Read

 

ಹಾಸನ : ಕೆರೆಗೆ ಹಾರಿ 15 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊರವಲಯದಲ್ಲಿ ನಡೆದಿದೆ.‌ ಪೂರ್ವಿಕಾ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ಬಾಲಕಿ ಪೂರ್ವಿಕಾ ಒಂಭತ್ತನೇ ತರಗತಿ ಓದುತ್ತಿದ್ದರು. ಹಾಸನದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ತಾಯಿ ಸುಬ್ಬಲಕ್ಷ್ಮಿ ಅವರ ಮೊಬೈಲ್‌ಗೆ ‌ಮೆಸೇಜ್ ಕಳುಹಿಸಿ ಬೆಳಗ್ಗಿನ ಜಾವ ಮನೆಯಿಂದ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಎಂದು ತಾಯಿ ಮೊಬೈಲ್ ಗೆ ಮೆಸೇಜ್ ಮಾಡಿದ್ದಾರೆ.

ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದಿಂದ ಬಾಲಕಿ ಶವಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *