ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಜೆಡಿಎಸ್ ಟಿಕೆಟ್ ಕೊನೆಗೂ ಭವಾನಿ ರೇವಣ್ಣ ಅವರಿಗೆ ಕೈತಪ್ಪಿದೆ. ಜೆಡಿಎಸ್ ಕಾರ್ಯಕರ್ತ ಸ್ವರೂಪ್ ಅವರಿಗೆ ಒಲಿದಿದೆ.
ಶತಾಯುಗತಾಯ ಹಾಸನ ಕ್ಷೇತ್ರದ ಟಿಕೆಟ್ ಪಡೆಯಲೇಬೇಕೆಂದು ಬಾರಿ ಕಸರತ್ತು ನಡೆಸಿದ್ದ ಭವಾನಿಯವರಿಗೆ ಬಾರೀ ನಿರಾಸೆಯಾಗಿದೆ. ಟಿಕೆಟ್ ಕೊಡಿಸಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಕೂಡಾ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದರು. ಆದರೆ ಕುಮಾರಸ್ವಾಮಿಯವರು ಮೊದಲಿನಿಂದಲೂ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಹಾಸನ ಟಿಕೆಟ್ ಎಂದು ಹೇಳಿದ್ದರು. ಅದರಂತೆಯೇ ಜೆಡಿಎಸ್ ಕಾರ್ಯಕರ್ತ ಸ್ವರೂಪ್ ಅವರಿಗೆ ಟಿಕೆಟ್ ನೀಡಿ, ತಮ್ಮ ಮಾತನ್ನು ಉಳಿಸಿಕೊಂಡು ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮೈಲುಗೈ ಸಾಧಿಸಿದ್ದಾರೆ.