ಹಾಸನ : ವರ್ಷಕ್ಕೊಮ್ಮೆ ದರ್ಶನ ಕೊಎಉವ ಹಾಸನಾಂಬೆ ಉತ್ಸವ ಮುಗಿದಿದೆ. ಇಂದಿನಿಂದ ಹುಂಡಿ ಏಣಿಕೆ ಕಾರ್ಯ ನಡೆಯುತ್ತಿದೆ. ಕಂದಾಯ ಇಲಾಖೆಯ 85 ಸಿಬ್ಬಂದಿಗಳು ಹುಂಡಿ ಏಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ.
ಅಕ್ಟೋಬರ್ 28ರಿಂದ ನವೆಂಬರ್ 6ರವರೆಗೆ ಹಾಸನಾಂಬೆ ಉತ್ಸವ ನಡೆದಿತ್ತು. ಹತ್ರತ್ರ 4ಲಕ್ಷ ಮಂದಿ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಹತ್ತು ದಿನದ ಉತ್ಸವಕ್ಕೆ ತೆರೆ ಬಿದ್ದಿದ್ದು, ಹುಂಡಿ ಎಣಿಕೆ ನಡೆಯುತ್ತಿದೆ. ಅಷ್ಟೇ ಅಲ್ಲ ಹಾಸನಾಂಬೆಗೆ ಭಕ್ತರು ಪತ್ರದ ಮೂಲಕವೂ ತಮ್ಮ ವಿವಿಧ ಬೇಡಿಕೆಗಳನ್ನ ಇಟ್ಟಿದ್ದಾರೆ.
ಒಬ್ಬರಂತು ಹೊಳೇನರಸೀಪುರದ ಶಾಸಕರನ್ನು ಬದಲಾಯಿಸು ತಾಯೇ ಅಂದ್ರೆ ಮತ್ತೊಬ್ಬರು ರಸ್ತೆ ಗುಂಡಿ ಸರಿ ಮಾಡಿಸು ತಾಯಿ ಅಂದಿದ್ದಾರೆ. ಒಬ್ರು ಗಂಡು ಮಗುಗೆ ಬೇಡಿಕೆ ಇಟ್ಟಿದ್ದಾರೆ. ತಾನಿಷ್ಟ ಪಟ್ಟ ಹುಡುಗನ ಜೊತೆ ಮದುವೆ ಮಾಡಿಸು ಎಂಬ ಬೇಡಿಕೆ. ಇನ್ನು ವಿದ್ಯಾರ್ಥಿಗಳದ್ದು ಪಾಸಿಗಾಗಿ ಬೇಡಿಕೆ. ಹೀಗೆ ಹಾಸನಾಂಬೆ ಎದುರು ಭಿನ್ನ ವಿಭಿನ್ನವಾದ ಬೇಡಿಕೆಗಳನ್ನೇ ಇಟ್ಟಿದ್ದಾರೆ.