ಹಾಸನ: ಹತ್ತು ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಿ, ಭಕ್ತರನ್ನ ಪಾವನಳಾಗಿಸಿದ್ದಾಳೆ. ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆಗೆ ರಾಜ್ಯದ ಮೂಲೆಮೂಲೆಯಿಂದಲೂ ಜನಸಾಗರವೇ ಹರಿದು ಬರುತ್ತೆ. ಹತ್ತು ದಿನಗಳ ಉತ್ಸವದಲ್ಲಿ ತಾಯಿಯನ್ನ ಕಣ್ತುಂಬಿಕೊಳ್ತಾರೆ.
ಇಂದು ಹಾಸನಾಂಬೆಯ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿತ್ತು. ಭಕ್ತಾಧಿಗಳ ವಿಭಿನ್ನ ಬೇಡಿಕೆಗಳು ಕಾಣಿಕೆ ಹುಂಡಿಯಲ್ಲಿ ಭದ್ರವಾಗಿತ್ತು. ಅದರ ಜೊತೆಗೆ ಕೋಟಿ ಕೋಟಿ ಹಣ ಭಕ್ತರಿಂದ ದೇವರಿಗೆ ಸಂದಾಯವಾಗಿದೆ.
ಸಂಜೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 1,54,37,940 ರೂಪಾಯಿ ಹಾಸನಾಂಬೆಯ ಹುಂಡಿಯಲ್ಲಿ ಸಂಗ್ರಹವಾಗಿದೆ. ದೇವಾಲಯದ ಹುಂಡಿಯಲ್ಲಿ 83,89,770 ರುಪಾಯಿ, ಪ್ರಸಾದದ ರೂಪದಲ್ಲಿ 63,97,815 ರೂಪಾಯಿ, ಸಿದ್ದೇಶ್ವರ ದೇವಸ್ಥಾನದ ಹುಂಡಿ ಸೇರಿದಂತೆ 06,50,355 ರುಇಪಾಯಿ ಸಂಗ್ರಹವಾಗಿದೆ. ಇನ್ನು ಹುಂಡಿಯಲ್ಲಿ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಭಕ್ತಾಧಿಗಳು ದೇವರಿಗೆ ಅರ್ಪಿಸಿದ್ದಾರೆ.