ಬೆಂಗಳೂರು : ಕಾಂಗ್ರೆಸ್ ನ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯೂ ಕೂಡ ಒಂದು. ಈ ಯೋಜನೆಗೆ ಇತ್ತಿಚೆಗಷ್ಟೇ ಚಾಲನೆ ಸಿಕ್ಕಿದೆ. ಮೊದಲ ಕಂತಿನ ಹಣವನ್ನು ಈಗಾಗಲೇ ಸಾವಿರಾರು ಮಹಿಳೆಯರು ಪಡೆದಿದ್ದಾರೆ. ಆದರೆ ಇನ್ನು ಒಂದಷ್ಟು ಮಂದಿಗೆ ಈ ಯೋಜನೆಯ ಹಣ ಬಂದಿಲ್ಲ. ಇದಕ್ಕೆ ನೂರೆಂಟು ಗಾಸಿಪ್ ಗಳು ಹಬ್ಬುತ್ತಿವೆ. ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಪರಿಶೀಲನೆ ಮಾಡಿದೆ, ಹೆಚ್ಚಿನ ಹಣ ಟ್ರಾನ್ಸಫರ್ ಆದವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುವುದಿಲ್ಲ ಎಂದೆಲ್ಲಾ ಸುದ್ದಿಗಳು ಹಬ್ಬುತ್ತಿವೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಆಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ 1.8 ಕೋಟಿ ಅರ್ಜಿ ಸಲ್ಲಿಕೆಯಾಗಿತ್ತು. ಈಗಾಗಲೇ 2,169 ಕೋಟಿ ಹಣ ಬಿಡುಗಡೆಯಾಗಿದೆ. 93 ಲಕ್ಷ ಅರ್ಜಿ ದಾರರಿಗೆ ಹಣ ಜಮಾವಣೆಯಾಗಿದೆ. 5.5 ಲಕ್ಷ ಜನರಿಗೆ ಟಿಬಿಟಿ ಮೂಲಕ ಹಣ ಜಮಾವಣೆಯಾಗಿದೆ.
1 ಲಕ್ಷದ 59 ಸಾವಿರ ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. 5 ಲಕ್ಷ 96 ಸಾವಿರ ಅರ್ಜಿದಾರರ ಬ್ಯಾಂಕ್ ಆಧಾರ್ ಜೋಡಣೆಯಾಗಿಲ್ಲ. 1 ಲಕ್ಷದ 75 ಸಾವಿರ ಅರ್ಜಿದಾರರ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ ಇದೆ. 9,766 ಅರ್ಜಿ ಸೇವಾಸಿಂಧು ವತಿಯಿಂದ ಪುನರ್ ಪರಿಶೀಲನೆ ನಡೀತಿದೆ ಎಂದು ತಿಳಿಸಿದ್ದಾರೆ. ಇನ್ನು ಸೆಪ್ಟೆಂಬರ್ನಲ್ಲಿ 1ಕೋಟಿ 14ಲಕ್ಷ ಜನ ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ. ಸೆಪ್ಟೆಂಬರ್ನಲ್ಲಿ ಗೃಹಲಕ್ಷ್ಮೀ ಯೋಜನೆಗಾಗಿ 2280 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚುವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.