ಹರ್ಷ ಕೊಲೆ ಪ್ರಕರಣ : ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ವಹಿಸಿ ; ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಗ್ರಹ

2 Min Read

ವರದಿ : ಸುರೇಶ್ ಪಟ್ಟಣ್ 

ಚಿತ್ರದುರ್ಗ, (ಫೆ 23) : ದಾರುಣವಾಗಿ ಕಗ್ಗೊಲೆಯಾದ ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗದಳ ಸಹ ಸಂಯೋಜಕ ಶ್ರೀ ಹರ್ಷನ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಇಂದು ನಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೊಲೆ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ವಹಿಸಬೇಕು ಹಾಗೂ ಪಿಎಫ್ ಐ ಮತ್ತು ಎಸ್ ಡಿಪಿಐ ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಳೆದ 20 ರ ರಾತ್ರಿ ದೇಶದ್ರೋಹಿ ಸಂಘಟನೆಗಳಾದ PFI ಮತ್ತು SDPI ಕೊಲೆಪಾತಕರಿಂದ ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗದಳ ಸಹ ಸಂಯೋಜಕ ಶ್ರೀಹರ್ಷನ ಹತ್ಯೆಯನ್ನು ವಿಶ್ವ ಹಿಂದೂ ಪರಿಷತ್ ಉಗ್ರವಾಗಿ ಖಂಡಿಸುತ್ತದೆ.

ಧರ್ಮರಕ್ಷಣೆಗೆಂದೇ ಬಾಳನ್ನು ಮುಡುಪಾಗಿಟ್ಟು ತನ್ನದೆಲ್ಲವನ್ನೂ ಸಮಾಜಕ್ಕೆ ಸಮರ್ಪಿಸಿ ಬಜರಂಗದಳದ ಸಕ್ರಿಯ ಕಾರ್ಯಕರ್ತನಾಗಿ ಭಾರತಮಾತೆಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ ಶ್ರೀಹರ್ಷ ದ್ರೋಹಿಗಳ ಸಂಚಿಗೆ ಬಲಿಯಾಗಿ ಕಗ್ಗೊಲೆಯಾಗಿದ್ದಾನೆ.

ಕೊಲೆಪಾತಕರು ಇಂತಹ ಕಾರ್ಯಕರ್ತರನ್ನೇ ನೇರವಾಗಿ ಗುರಿ ಇಟ್ಟು ಹತ್ಯೆ ಮಾಡುತ್ತಾ ಬಂದಿರುವುದು ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಿದ್ದು, ಇದು ಸರ್ಕಾರಕ್ಕೆ ಸವಾಲಾಗಿದ್ದರೆ ಸಾಮಾನ್ಯ ಪ್ರಜೆಯಾದ ಜಾಗೃತ ಹಿಂದೂ ಕಂಗಾಲಾಗಿದ್ದಾನೆ, ಪರಿಸ್ಥಿತಿಯನ್ನು ಹೀಗೆಯೆ ಬಿಟ್ಟರೆ ಇಡೀ ದೇಶಕ್ಕೆ ಗಂಡಾಂತರ ಕಾದಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ.

ಸರ್ಕಾರವು ಎಚ್ಚೆತ್ತುಕೊಂಡು ದಾರುಣವಾಗಿ ಹತ್ಯೆ ಮಾಡಿದ ಕೊಲೆಪಾತುಕರನ್ನು ಈ ಕೂಡಲೇ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿ, ಕಠಿಣವಾಗಿ ಶಿಕ್ಷಿಸಿ ಉಗ್ರರಿಗೆ ಎಚ್ಚರಿಕೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಶ್ರೀಹರ್ಷನ ಹತ್ಯೆ ಸಾಮಾನ್ಯ ಹತ್ಯೆಯಾಗಿರದೆ ದೇಶದ್ರೋಹಿ ಸಂಚಿನ ಹತ್ಯೆಯಾಗಿರುವುದರಿಂದ, ಇದರ ತನಿಖೆಯನ್ನು ಕೇಂದ್ರ ತನಿಖಾದಳಕ್ಕೆ  ಒಪ್ಪಿಸಿ ಈ ಹತ್ಯೆಯ ಹಿಂದಿರುವ ಸಮಾಜಘಾತುಕರ ಸಂಚನ್ನು ಬಯಲಿಗೆಳೆದು ಅವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು‌.

ಪ್ರತಿಭಟನಾಕಾರರು, ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸಿ ಸಮಾಜದ ಶಾಂತಿಯನ್ನು ಕದಡುತ್ತಿರುವ ದೇಶದ್ರೋಹಿ ಸಂಘಟನೆಗಳಾದ PFI ಮತ್ತು SDPI ಗಳನ್ನು ಕರ್ನಾಟಕ ಸರ್ಕಾರವು ಈ ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಹತ್ಯೆಗೊಳಗಾದ 26 ರ ಹರೆಯದ ತರುಣ ಶ್ರೀಹರ್ಷ ಬಡ ಕುಟುಂಬದಿಂದ ಬಂದಿದ್ದು, ವಯಸಾದ ತಂದೆ ತಾಯಿಗಳಿಗೆ ಮಗನೆ ಆಧಾರವಾಗಿದ್ದ. ಪುತ್ರನನ್ನು ಕಳೆದುಕೊಂಡು ನಿರಾಶ್ರಿತರಾಗಿ ದುಃಖತಪ್ತರಾಗಿರುವ ಮೃತ ಶ್ರೀಹರ್ಷನ ತಂದೆತಾಯಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಈ ಕೂಡಲೇ 25 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡುವಂತೆ ಗೃಹಮಂತ್ರಿಗಳಲ್ಲಿ ಮನವಿ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ವಿಭಾಗ ಸಂಚಾಲಕ ಪ್ರಭಂಜನ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್ ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್ ಸಹಸಂಚಾಲಕ ಕೇಶವ ನಗರ ಅಧ್ಯಕ್ಷರು ಶ್ರೀನಿವಾಸ್ ಪ್ರಮುಖರಾದ ಓಂಕಾರ್, ವಿಠ್ಠಲ್ ,ಶಶಿ ,ರಾಜೇಶ್, ಇನ್ನಿತರ ಇದ್ದರು. ಮತ್ತು ಮಾತೃಶಕ್ತಿ ದುರ್ಗಾ ವಾಹಿನಿ ಪ್ರಮುಖರಾದ ಶ್ರೀವತ್ಸ ಶ್ವೇತ ಹೀಗೆ ಅನೇಕ ಮಹಿಳಾ ಕಾರ್ಯಕರ್ತರು ಇದ್ದರು. ಆರ್ ಎಸ್ ಎಸ್ ಪ್ರಮುಖರಾದ ರಾಜಕುಮಾರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದ್ರಿನಾಥ್ ಹಾಗೂ ತಿಪ್ಪೇಸ್ವಾಮಿ ಟೈಗರ್ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಮುರುಳಿ ಬಿಜೆಪಿ ಮುಖಂಡರಾದ ಸಿದ್ದೇಶ್ ಯಾದವ್ ವೆಂಕಟೇಶ್ ಯಾದವ್ ಸುರೇಶ್ ಸಿದ್ದಾಪುರ ಜಿ ಎಂ ಸುರೇಶ್ ಸಿದ್ದಾರ್ಥ್ ನವೀನ್ ಚಾಣಕ್ಯ ಹನುಮಂತೇಗೌಡ ಶಿವಣ್ಣ ಚಾರಿ ಸಂಪತ್ ಹೀಗೆ ಸಂಘಪರಿವಾರದ ಪ್ರಮುಖರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *