ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮೇಲೆ ಮತ್ತೆ ಹಲ್ಲೆ ಆರೋಪ ಎದುರಾಗಿದೆ. ಬಳ್ಳಾರಿ ಗ್ರಾಮೀಣ ಯು ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೆಗೌಡ ಈ ಆರೋಪ ಮಾಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸ್ಪಷ್ಟನೆ ನೀಡಿದ ನಲಪಾಡ್, ನನಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ನನ್ನವರೇ ಇರಬಹುದು ಅಥವಾ ವಿರೋಧಿಸುವವರು ಇರಬಹುದು ಈ ರೀತಿ ಮಾಡ್ತಾ ಇದ್ದಾರೆ. ನನಗೂ ಈ ಬಗ್ಗೆ ಗೊತ್ತಿಲ್ಲ. ಬೆಳಗ್ಗೆ ವಾಟ್ಸಾಪ್ ನೋಡಿ ಆಶ್ಚರ್ಯ ಆಯ್ತು. ನಿನ್ನೆ ರಾತ್ರಿ ಅವರವರೇ ಸೇರಿಕೊಂಡು ಊಟ ಮಾಡಿಕೊಂಡಿದ್ರು. ಇದರಲ್ಲಿ ನನ್ನ ವಿರುದ್ಧ ಪಿತೂರಿ ಇದೆ. ಈ ಹಿಂದೆಯೂ ಅಧ್ಯಕ್ಷ ಸ್ಥಾನ ತಪ್ಪಿಸಲು ಗಲಾಟೆ ಮಾಡಿದ್ರು.
ಎಲ್ಲಾ ಜಿಲ್ಲಾಧ್ಯಕ್ಷರ ಜೊತೆ ನನಗೆ ಒಳ್ಳೆ ಬಾಂಧವ್ಯವಿದೆ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. 10 ದಿನದಲ್ಲಿ ಅಧ್ಯಕ್ಷ ನಾಗಿ ಅಧಿಕಾರ ಸ್ವೀಕರಿಸಬೇಕು. ನಿನ್ನೆ ಪೂರ್ವಭಾವಿ ಸಭೆ ನಡೆಸಿದ್ದು ನಿಜ. ಸಂಜೆ ಊಟಕ್ಕೆ ಎಲ್ಲರು ಸೇರಿದ್ರು. ಗಲಾಟೆ ಆಗಿಲ್ಲ ಅಂತ ಸಿದ್ದು ಸಹ ಹೇಳ್ತಿದ್ದಾರೆ. ನಾನು ರಾತ್ರಿನೇ ಹೊಟೇಲ್‌ನಿಂದ ವಾಪಾಸ್ ಬಂದಿದೆ.
ಪದೇ ಪದೇ ನನ್ನ ಮೇಲೆ ಆರೋಪ ಬರುತ್ತಲೆ ಇದೆ. ಎಲ್ಲರಿಂದಲೂ ಮಾಹಿತಿ ಪಡೆದುಕೊಳ್ಳಿ. ನನಗೆ ಎಲ್ಲಾ ಜಿಲ್ಲಾಧ್ಯಕ್ಷರ ಜೊತೆ ಒಳ್ಳೆ ಬಾಂಧವ್ಯ ಇದೆ. ಫೆಬ್ರವರಿಯಿಂದ ಅಧ್ಯಕ್ಷನಾಗಿ ಅಧಿಕಾರ ಅಂತ ಆರ್ಡರ್ ಆಗಿದೆ. ಯಾರು ಬಂದು ಬದಲಾವಣೆ ಮಾಡ್ಬೇಕು ಅನ್ನೋದು ಇಲ್ಲ. ಈ ರೀತಿ ಗಲಾಟೆ ಆಗಿರೋದ್ರಿಂದ ಅಧ್ಯಕ್ಷ ಸ್ಥಾನ ತಪ್ಪುತ್ತೆ ಅನ್ನೋದೆಲ್ಲ ಭ್ರಮೆ. ಯುವಕರನ್ನೆಲ್ಲಾ ಸೇರಿಸಬೇಕು ಅನ್ನೋ ಉದ್ದೇಶ. ಅಧ್ಯಕ್ಷನಾಗಿ ಮನೆ ಕಟ್ಟಿಕೊಳ್ಳಲು ಮಾಡ್ತಿಲ್ಲ. ಪಕ್ಷ ಕಟ್ಟೋದಕ್ಕೆ ಅಧ್ಯಕ್ಷ ಸ್ಥಾನಕ್ಕೆ ಹೋಗ್ತಾ ಇರೋದು ಎಂದು ಸ್ಪಷ್ಟನೆ ನೀಡಿದ್ದಾರೆ.