
ಚಿತ್ರದುರ್ಗ, (ಜ.22) : ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಫೆಬ್ರವರಿ 21 ರಿಂದ 27 ರ ವರೆಗೂ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಹರಿದಾಸ ಹಬ್ಬ 2023 ಮತ್ತು 30ನೇ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭ ನೆರವೇರಿತು.

ವೇದಿಕೆಯಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಪಿ.ಎಸ್. ಮಂಜುನಾಥ, ನಗರಸಭಾ ಸದಸ್ಯ ಶ್ರೀ ಜಿ.ಹರೀಶ್, ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಶ್ರೀ ಎಲ್.ಈ. ಶ್ರೀನಿವಾಸ್, ಬಡಗುನಾಡು ಸಂಘದ ಶ್ರೀ ಎ.ಶೇಷಗಿರಿ, ಬ್ರಹ್ಮ ಚೈತನ್ಯ ಮಂಡಳಿಯ ಶ್ರೀ ಕಟೀಲ್ ದಿವಾಕರ್, ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರಾದ ಶ್ರೀ ಪಿ. ಧೀರೇಂದ್ರಾಚಾರ್ ಮತ್ತು ಹರಿವಾಯುಗುರು ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಟಿ.ಕೆ. ನಾಗರಾಜ್ ಹಾಗೂ ಕಾರ್ಯದರ್ಶಿ ಶ್ರೀ ಹುಲಿರಾಜಾಚಾರ್ ಜೋಯಿಸ್ ಮತ್ತು ಸಂಚಾಲಕರಾದ ಶ್ರೀ ಟಿ.ಎಸ್. ಗೋಪಾಲಕೃಷ್ಣ ಅವರು ಉಪಸ್ಥಿತರಿದ್ದರು.

GIPHY App Key not set. Please check settings