ಮಗನ ಜೊತೆ ಕಪ್ ಗೆದ್ದ ಖುಷಿ ಹಂಚಿಕೊಂಡ ಹಾರ್ದಿಕ್ ಪಾಂಡ್ಯ : ಪತ್ನಿಯ ಸುಳಿವಿಲ್ಲ.. ಡಿವೋರ್ಸ್ ಕನ್ಫರ್ಮ್..?

ನಮ್ಮ ಟೀಂ ಇಂಡಿಯಾ ವಿಶ್ವಕಪ್ ತಮ್ಮದಾಗಿಸಿಕೊಂಡು ಬಹಳ ಸಂಭ್ರಮದಲ್ಲಿದೆ. ಗೆದ್ದ ಮರುದಿನವೇ ತವರಿಗೆ ಬರಲು ಆಗದೆ ಹೋದರು, ಈಗ ಬಂದಿರುವ ಟೀಂ ಇಂಡಿಯಾ ಸದಸ್ಯರನ್ನು ಎಲ್ಲರೂ ಕೊಂಡಾಡಿದ್ದಾರೆ. ಈಗಾಗಲೇ ಆಟಗಾರರ ಜೊತೆಗೆ ವಿಶ್ವಕಪ್ ಮೆರವಣಿಗೆಯೂ ನಡೆದಿದೆ. ಆಟಗಾರರಿಗೆ ಅವರವರ ಮನೆಯಲ್ಲಿ ಅದ್ದೂರಿ ಸ್ವಾಗತವೂ ಸಿಕ್ಕಿದೆ. ಮನೆಯವರ ಜೊತೆಗೆ ಸೆಲೆಬ್ರೇಷನ್ ಕೂಡ ಜೋರಾಗಿದೆ.

ಹಾರ್ದಿಕ್ ಪಾಂಡ್ಯ ಕೂಡ ವಿಶ್ವಕಪ್ ಗೆದ್ದ ಬಳಿಕ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಬಲೂನ್ ಗಳಿಂದ ಅಲಂಕಾರ ಮಾಡಿದ್ದು, ಹಾರ್ದಿಕ್ ಪಾಂಡ್ಯ ಎಂಬ ಪದಗಳಗಳನ್ನು ಹಾಕಿದ್ದಾರೆ. ಈ ಸಂಭ್ರಮವನ್ನು ಹಾರ್ದಿಕ್ ಪಾಂಡ್ಯಾ ತಮ್ಮ ಮಗ ಅಗಸ್ತ್ಯನ ಜೊತೆಗೆ ಹಂಚಿಕೊಂಡಿದ್ದಾರೆ. ಫೋಟೋಗೆ ಕ್ಯಾಪ್ಶನ್ ಕೂಡ ಹಾಕಿದ್ದಾರೆ. ‘My #1.. ನನಗೆ ಎಲ್ಲವೂ ನೀನೆ. ನಾನು ಏನೇ ಮಾಡಿದರು ಅದು ನಿನಗಾಗಿಯೇ ಮಾಡುತ್ತೇನೆ’ ಎಂದು ಬರೆದುಕೊಳ್ಳುವ ಮೂಲಕ ಮಗನ ಮೇಲಿನ ಪ್ರೀತಿ, ಕಾಳಜಿ ಎಂಥದ್ದು ಎಂಬುದನ್ನು ತೋರಿಸಿದ್ದಾರೆ‌.

https://www.instagram.com/p/C9CrvrtNaEA/?igsh=MWFiMnBzNmlxOHBncQ==

ಮಗನ ಜೊತೆಗೆ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದ ಹಾರ್ದಿಕ್ ಪಾಂಡ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ‌. ಆದರೆ ಇದರ ಜೊತೆಗೆ ಚರ್ಚೆ ಕೂಡ ಶುರುವಾಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ಮಗನ ಜೊತೆಗೆ ತಾಯಿಯ ಫೋಟೋ ಎಲ್ಲಿಯೂ ಹಾಕಿಲ್ಲ. ಕಳೆದ ಕೆಲವು ದಿನಗಳಿಂದ ನತಾಶ ಹಾಗೂ ಹಾರ್ದಿಕ್ ಪಾಂಡ್ಯ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತಿದೆ. ಇಬ್ಬರು ಡಿವೋರ್ಸ್ ಪಡೆದಿದ್ದಾರೆ ಎಂಬ ವದಂತಿ ಇದೆ. ಈಗ ವಿಶ್ವಕಪ್ ಸಂಭ್ರಮದಲ್ಲೂ ನತಾಶ ಕಾಣಿಸಿಕೊಳ್ಳದೇ ಇರುವುದು ಡಿವೋರ್ಸ್ ವಿಚಾರಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *