ಕಳೆದ ನಾಲ್ಕೈದು ದಿನದಿಂದ ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದೇ ಆಯ್ತು. ಮತ್ತೆಬಿಳಿಯಲ್ವೇನೋ ಏನು ಮಾಡೋದು ದೇವ್ರೇ ಅಂತ ಅದೆಷ್ಟೋ ಚಿನ್ನಾಭರಣ ಪ್ರಿಯರು ಬೇಸರ ಮಾಡಿಕೊಂಡಿದ್ದರು. ಇದೀಗ ಆ ಬೇಸರಕ್ಕೆ ಇಂದಿನ ಚಿನ್ನದ ಖುಷಿ ಕೊಟ್ಟಿದೆ. ಮಂಗಳವಾರ ಒಂದೇ ದಿನಕ್ಕೆ ಚಿನ್ನದಲ್ಲಿ 120 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಗ್ರಾಂ ಚಿನ್ನದ ದರ 7000 ಕ್ಕೆ ಸಮೀಪಿಸಿದೆ. 18 ಕ್ಯಾರೆಟ್ ಚಿನ್ನದ ದರ ಸದ್ಯಕ್ಕೆ 5,800 ರೂಪಾಯಿ ಇದೆ. ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಗ್ರಾಂಗೆ ರೂಪಾಯಿ 2ರಷ್ಟು ಇಳಿಕೆಯಾಗಿದೆ. ಹಾಗಾದ್ರೆ ಭಾರತದಲ್ಲಿ ಯಾವ್ಯಾವ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣಾ.
ಬೆಂಗಳೂರಿನಲ್ಲಿ ಸದ್ಯ ಹತ್ತು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 70,800 ರೂಪಾಯಿ ಆಗಿದೆ. 24 ಕ್ಯಾರಟ್ ನ 10 ಗದರಾಮನ ಚಿನ್ನದ ಬೆಲೆ 77,240 ರೂಪಾಯಿ ಆಗಿದೆ. 18 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 57,930 ರೂಪಾಯಿ ಇದೆ. ಹಾಗೇ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಂಗೆ 89.50 ರೂಪಾಯಿ ಇದೆ.
ಬೇರೆ ನಗರಗಳಲ್ಲಿ ಚಿನ್ನದ ದರ ನೋಡಿದರೆ, ಬೆಂಗಳೂರು, ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರದಲ್ಲಿ 70,800 ಹತ್ತು ಗ್ರಾಂನ 22 ಕ್ಯಾರಟ್ ಚಿನ್ನಕ್ಕಿದೆ. ಹಾಗೇ ದೆಹಲಿಯಲ್ಲಿ 70,950, ಅಹ್ಮದಾಬಾದ್ 70,850, ಜೈಪುರ 70,950, ಲಕ್ನೋ 70,950 ರೂಒಅಯಿ ಬೆಲೆ ಇದೆ. ಬೆಳ್ಳಿ ಬೆಲೆಯಲ್ಲೂ ಕೂಡ ಕೊಂಚ ಏರುಪೇರಾಗಿದೆ. ಬೆಂಗಳೂರು ಸೇರಿ ಹಲವು ನಗರಗಳಲ್ಲಿ 100 ಗ್ರಾಂ ಬೆಳ್ಳಿ 8,950 ರೂಪಾಯಿ ಇದೆ.