ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜೂ.21) : ರಾಜ್ಯಾದ್ಯಂತ ಸರ್ಕಾರಿ ಬಸ್‍ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಹಾಗೂ ಪಿಂಚಣಿ ಹೆಚ್ಚಳಕ್ಕೆ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಮಂಜುನಾಥ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಸಭೆ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆಯಿತು.
ಅಂಗವಿಕಲರಿಂದ ವರ್ಷಕ್ಕೆ 660 ರೂ.ಗಳನ್ನು ಕಟ್ಟಿಸಿಕೊಂಡು ನೂರು ಕಿ.ಮೀ. ಒಳಗೆ ಸಂಚರಿಸಲು ಸರ್ಕಾರ ಅವಕಾಶ ನೀಡಿತ್ತು. ಈಗ ಉಚಿತವಾಗಿ ರಾಜ್ಯಾದ್ಯಂತ ಸಂಚರಿಸಲು ವ್ಯವಸ್ಥೆ ಕಲ್ಪಿಸಬೇಕು. ಅದೇ ರೀತಿ ಕೆಲವು ಅಂಗವಿಕಲರಿಗೆ ಮಾಸಿಕ ಎಂಟು ನೂರು ರೂ. ಇನ್ನು ಕೆಲವರಿಗೆ 1400 ರೂ. ಪಿಂಚಣಿ ಬರುತ್ತಿದೆ. ಅದನ್ನು ಮೂರು ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಜೂ. 27 ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತೆಂದು ಸಂಘದ ಅಧ್ಯಕ್ಷ ಟಿ.ಬಿ.ಮಾರುತಿ ತಿಳಿಸಿದ್ದಾರೆ.
ಗೌರವಾಧ್ಯಕ್ಷ ಕೆ.ಹೆಚ್.ಜಯಪ್ರಕಾಶ್, ಕಾರ್ಯದರ್ಶಿ ಭಾನುಕಿರಣ, ಖಜಾಂಚಿ ಎನ್.ತಿಪ್ಪೇಸ್ವಾಮಿ, ಸದಸ್ಯರುಗಳಾದ ಆರ್.ತಿಪ್ಪೇಸ್ವಾಮಿ, ಟಿ.ಕೆ.ವೆಂಕಟೇಶ್, ಎಂ.ಎಸ್.ಪಾಪಯ್ಯ, ಪಿ.ಮಂಜುನಾಥ, ರಂಗಸ್ವಾಮಿ, ಕುಮಾರ್, ಆನಂದ, ಮಂಜುನಾಥ ಸಭೆಯಲ್ಲಿ ಉಪಸ್ಥಿತರಿದ್ದರು.