ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.12 : ಮೆದೇಹಳ್ಳಿ ರಸ್ತೆ, ಅಗ್ನಿಶಾಮಕ ಠಾಣೆ ಮುಂಭಾಗದಲ್ಲಿರುವ ಶೈನ್ ಅಕಾಡೆಮಿ ಅಬಾಕಸ್ ಟ್ರೈನಿಂಗ್ ಸೆಂಟರ್‍ನಲ್ಲಿ ಜಿಲ್ಲೆಯ ಅಂತರ್ ಶಾಲಾ ಒಂದರಿಂದ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಹ್ಯಾಂಡ್ ರೈಟಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ಬಹುಮಾನ ವಿತರಿಸಲಾಯಿತು.
ಜಿ.ಎಂ.ಯೂನಿವರ್ಸಿಟಿ ದಾವಣಗೆರೆಯ ಟ್ರೈನಿಂಗ್ ಅಂಡ್ ರೀಪ್ಲೇಸ್‍ಮೆಂಟ್ ಆಫೀಸರ್ ಡಾ.ತೇಜಸ್ವಿಕಟ್ಟಿಮನಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡುತ್ತ ಶಾಲೆಯಲ್ಲಿ ಪಠ್ಯವನ್ನು ಹೊರತುಪಡಿಸಿ ಇಂತಹ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಶೈನ್ ಅಕಾಡೆಮಿ ಆಡಳಿತಾಧಿಕಾರಿ ರೂಪವಿಶ್ವನಾಥ್, ಈವೆಂಟ್ ಕೋಆರ್ಡಿನೇಟರ್ ಸವಿತ ಸುನೀಲ್ ಬಹುಮಾನ ವಿತರಣೆಯಲ್ಲಿ ಉಪಸ್ಥಿತರಿದ್ದರು.
330 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, 47 ಮಕ್ಕಳು ವಿಜೇತರಾಗಿ ಬಹುಮಾನ ಪಡೆದುಕೊಂಡರು.