ಸದ್ಯ ತೆರವಾಗಿದ್ದ ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ನಿಗದಿಯಾಗಿದೆ. ಉಪಚುನಾವಣೆಗೆ ಈಗಾಗ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡಿಕೊಂಡಿದೆ. ಉಳಿದಿರೋದು ಬಿಜೆಪಿ ಪಕ್ಷ ಒಂದೇ.
ಆದ್ರೆ ಬಿಜೆಪಿ ಪಕ್ಷದಿಂದ ಸುಲಭದಲ್ಲಿ ಅಭ್ಯರ್ಥಿ ಘೋಷಣೆ ಸಾಧ್ಯವಿಲ್ಲ. ಯಾಕಂದ್ರೆ ಟಿಕೆಟ್ ಆಕಾಂಕ್ಷಿಗಳೇ ಬರೋಬ್ಬರಿ 11 ಮಂದಿ ಇದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಅಭ್ಯರ್ಥಿ ಆಯ್ಕೆಯಲ್ಲಿ ಜಾಗೃತೆವಹಿಸಬೇಕಾಗಿದೆ. ಮನಸ್ತಾಪಗಳನ್ನ ಶಮನ ಮಾಡಿ ಟಿಕೆಟ್ ಘೋಷಿಸಬೇಕಾಗಿದೆ.
ಹಾನಗಲ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆದಿದ್ದು, ಆ ಸಭೆಯಲ್ಲಿ 11 ಜನ ಆಕಾಂಕ್ಷಿಗಳ ಬಗ್ಗೆ ಬಿಜೆಪಿ ಕೋರ್ ಕಮಿಟಿ, ಹೈಕಮಾಂಡ್ ಗೆ ಕಳುಹಿಸಿದೆ. ಇನ್ನೇನಿದ್ರು ಹೈಕಮಾಂಡ್ ನಿಂದ ಫೈನಲ್ ಮುದ್ರೆ ಬೀಳಬೇಕಿದೆ.