ಬೆಂಗಳೂರು: ಇಂದು ಗಾಂಧಿಭವನದಲ್ಲಿ ಎಸ್ ಜಿ ಸಿದ್ದರಾಮಯ್ಯ ಅವರ ಆತ್ಮಕಥನ ಬಿಡುಗಡೆ ಕಾರ್ಯಕ್ರಮವಿತ್ತು. ಅದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹಂಸಲೇಖ ಅವರು ಸೇರಿದಂತೆ ಅನೇಕರು ಭಾಗಿಯಾಗಿದ್ರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಂಸಲೇಖ ಅವರು ಪೇಜಾವರ ಶ್ರೀ ಬಗ್ಗೆ ನೀಡಿದ್ದ ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿದ್ದರು. ಇದೀಗ ಇದೇ ಕಾರ್ಯಕ್ರಮದಲ್ಲಿ ಮಾತನಾಡಿರೋ ಹಂಸಲೇಖ ಅವರು ನಾನು ಹೆದರೋದಿಲ್ಲ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಅವರು, ನಾನು ಮಾಗಡಿ ರೋಡ್ ನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು. ನೀವು ಕಂಡಂತೆ ನಾನೇನು ಭಯಸ್ತನಲ್ಲಿ. ದೊಡ್ಡ ಚರಿತ್ರೆಯೇ ಇದೆ. ನಾನು ಯಾರಿಗೂ ಹೆದರೋದಿಲ್ಲ ಎಂದಿದ್ದಾರೆ
ಇನ್ನು ನನಗೆ ಎಪ್ಪತ್ತು.. ತಿನ್ನೋದು ಒಪ್ಪತ್ತು ನನ್ನ ಗುರುಗಳು ಎಸ್ ಜಿ ಸಿದ್ದರಾಮಯ್ಯ. ಆ ಹೇಳಿಕೆ ನೀಡಿದಾಗ ನನಗೆ ಧೈರ್ಯ ತುಂಬಿದರು. ನೀನು ಸುಮ್ಮನಿರು ನಾನು ನೋಡಿಕೊಳ್ಳುತ್ತೇನೆ ಎಂದರು. ನಾಡಿನ ಪ್ರಗತಿಪರ ಚಿಂತಕರನ್ನ ಒಗ್ಗೂಡಿಸಿ ನನಗೆ ಬೆಂಬಲ ನೀಡಿದ್ರು ಅಂತ ಗುರುಗಳ ಬಗ್ಗೆ ಹೊಗಳಿಕೆಯ ಮಾತನಾಡಿದ್ರು.
ಇದೇ ವೇಳೆ ಸಿದ್ದರಾಮಯ್ಯ ಅವರ ಬಗ್ಗೆಯೂ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮತ್ತೆ ಮುಂದಿನ ಸಿಎಂ ಆಗಲಿ. ದೇಶದ ಪ್ರಜಾಪ್ರಭುತ್ವ ಕಾಪಾಡಲಿ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಸಿದ್ದರಾಮಯ್ಯ ಅವರು ನನಗೆ ಸಹಾಯ ಮಾಡಿದ್ದಾರೆ. ದೇಸಿ ಶಾಲೆಗಾಗಿ ಜಾಗದ ಅಗತ್ಯವಿತ್ತು. ಆಗ ಸಿದ್ದರಾಮಯ್ಯ ಅವರು ಸಹಾಯ ಮಾಡಿದ್ರು ಎಂದಿದ್ದಾರೆ.