ಬೆಂಗಳೂರು: ಪೇಜಾವರ ಶ್ರೀ ಬಗ್ಗೆ ನಾದಬ್ರಹ್ಮ ಹಂಸಲೇಖ ಅವರು ನೀಡಿದ ಹೇಳಿಕೆ ಎಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ಹೇಳಿಕೆಗೆ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.

ದಲಿತರ ಮನೆಗೆ ಹೋಗಿ ಪೇಜಾವರ ಶ್ರೀಗಳು ಕೋಳಿ ಊಟ ತಿಂತಾರಾ ಎಂದು ಪ್ರಶ್ನಿಸಿದ್ದರು. ಮೈಸೂರಿನ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಈ ಹೇಳಿಕೆ ನೀಡಿದ್ದರು. ಪೇಜಾವರ ಶ್ರೀಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಎಂಬ ಸ್ಟೇಟ್ಮೆಂಟ್ ಬಂದಿದೆ. ಅವರು ಅಲ್ಲಿ ಕುಳಿತುಕೊಳ್ಳಬಹುದಷ್ಟೇ, ಕೋಳಿ ತಿಂತಾರಾ..? ಬೇಡ ಕೋಳಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ ಎಂಬ ಹೇಳಿಕೆ ನೀಡಿದ್ರು. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭುಗಿಲೆದ್ದಿತ್ತು. ಅದನ್ನ ಅರಿತ ಹಂಸಲೇಖ ಅವರು ಇದೀಗ ಕ್ಷಮೆ ಕೇಳಿದ್ದಾರೆ.

ಮೊದಲಿಗೆ, ಎರಡನೇಯದಾಗಿ ಕ್ಷಮೆ ಇರಲಿ. ನನಗೆ ಗೊತ್ತಿದೆ ಆ ಮಾತು ವೇದಿಕೆ ಮೇಲೆ ಅಲ್ಲ. ಅದು ತಪ್ಪು.. ಅದೊಂದು ಪ್ರಶಸ್ತಿ ಪುರಸ್ಕಾರ ಸಭೆ. ಅಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕಾಗಿತ್ತು. ಈ ಅಸ್ಪೃಶ್ಯತೆಯ ಅನಿಷ್ಠತೆಯನ್ನ ತೊಡೆದು ಹಾಕಲು ಪೇಜಾವರ ಶ್ರೀಗಳಂತವರು ಪ್ರಯತ್ನ ಮಾಡ್ತಾ ಇದ್ದಾರೆ. ನನಗೆ ಈ ಎಲ್ಲಾ ಸಂಧಾನಗಳ ಪ್ರಯತ್ನಗಳ ಬಗ್ಗೆ ಗೌರವವಿದೆ. ದಶಕಗಳ ಹಿಂದೆ ಕಲಾರಂಗದಲ್ಲೂ ಈ ಅಸ್ಪೃಶ್ಯತೆ ತಾಂಡವವಾಡ್ತಾ ಇತ್ತು. ಅದು ಈಗ ಕರಗಿ ಮಾಯವಾಗಿದೆ. ನಾನು ಅಲ್ಲಿ ಆಡಿದ ಕೆಲವು ಮಾತುಗಳು ನನ್ನ ಹೆಂಡತಿಗೆ ಹಿಡಿಸಲಿಲ್ಲ. ಆಕೆಯೇ ಪ್ರತಿಭಟಿಸಿದಳು ಎಂದು ವಿಡಿಯೋ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.

