ದಕ್ಷಿಣ ಕೊರಿಯಾದಲ್ಲಿ ಭೀಕರ ದುರಂತ :  ಕಾಲ್ತುಳಿತಕ್ಕೆ 146 ಸಾವು, 150 ಕ್ಕೂ ಹೆಚ್ಚು ಜನರಿಗೆ ಗಾಯ, ವಿಡಿಯೋ ನೋಡಿ…!

ಸಿಯೋಲ್ : ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಪ್ರಮುಖ ಮಾರುಕಟ್ಟೆಯೊಂದರಲ್ಲಿ ಕಾಲ್ತುಳಿತದಿಂದಾಗಿ ಕನಿಷ್ಠ 146 ಜನರು ಸಾವನ್ನಪ್ಪಿದ್ದು,150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

https://twitter.com/FridaGhitis/status/1586394362304376832?t=Tp97xAf9DdXKW-vf6iXZIA&s=19

https://twitter.com/feedforyou11/status/1586366552416219136?t=0-ZyS3CYLmVAZGpJxs4xfA&s=19

 

 

ನೂರಾರು ಅಂಗಡಿಗಳು ಮತ್ತು ಪಾರ್ಟಿ ಸ್ಥಳಗಳನ್ನು ಹೊಂದಿರುವ ಇಟಾವಾನ್‌ನಲ್ಲಿ ಶನಿವಾರ ರಾತ್ರಿ ಹ್ಯಾಲೋವೀನ್ ಹಬ್ಬದ ಪ್ರಯುಕ್ತ
ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಸ್ಥಳೀಯ ಸುದ್ದಿವಾಹಿನಿಗಳು ತಿಳಿಸಿವೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ತಡೆ ನೀಡಲಾಗಿತ್ತು. ಎರಡು ವರ್ಷಗಳ ನಂತರ ಮೊದಲ ಹ್ಯಾಲೋವೀನ್ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಘಟನಾ ಸ್ಥಳಕ್ಕೆ 400 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಮತ್ತು 140 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *