ಬೆಂಗಳೂರು: ಮಾಂಸ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸ್ಪಷ್ಟ ನಿಲುವನ್ನ ಹೇಳಿದ್ದೀವಿ. ಯಾಕೆ ಇದನ್ನ ಬೀದಿ ರಂಪಾ ಮಾಡ್ತಾ ಇದ್ದೀರಾ.. ಮೊದಲಿನಿಂದ ಹೇಗೆ ನಡೆಯುತ್ತಿದೆಯೋ ಹಾಗೆ ನಡೆದುಕೊಂಡು ಹೋಗಲಿ. ಹೊಸದಾಗಿ ವಿಚಾರಗಳು ಯಾರ ತಲೆಯಲ್ಲೂ ಬರಬಾರದು ನಾವೂ ಅದಕ್ಕೆ ಅವಕಾಶ ಕೊಡಲ್ಲ. ಜಿಲ್ಲಾಧಿಕಾರಿಗಳಿಗೆ ಯಾರೋ ಅರ್ಜಿ ಕೊಡ್ತಾರೆ. ಹಲಾಲ್ ಬಗ್ಗೆ ಕ್ರಮ ತೆಗೆದುಕೊಳ್ಳಿ ಅಂತಾರೆ. ಇದು ಸುದ್ದಿಯಾಗುತ್ತಿದೆ. ಸರ್ಕಾರ ಹೇಗೆ ಮೊದಲಿನಿಂದ ನಡೆದುಕೊಂಡು ಬರುತ್ತಿದೆ. ಅವರವರ ಸಂಪ್ರದಾಯ, ವಿಚಾರಗಳೇನಿದೆ ಹಾಗೆ ನಡೆದುಕೊಂಎಉ ಹೋಗುತ್ತೆ. ಇದನ್ನೇ ಖರೀದಿ ಮಾಡಬೇಕು, ಇಂಥ ಅಂಗಡಿಯಲ್ಲೇ ಖರೀದಿಮಾಡಬೇಕು ಅಂತ ಹೇಳೊ ಅಧಿಕಾರ ಯಾವ ಸಂಘ ಸಂಸ್ಥೆಗಳಿಗೂ ಇಲ್ಲ.

ಸಿ ಟಿ ರವಿ ಅವರ ಹೇಳಿಕೆ ನೋಡಿದ್ದೇನೆ. ಮುಸ್ಲಿಂರ ಅಂಗಡಿಗಳಲ್ಲಿ ಹಿಂದೂಗಳು ಮಾಂಸ ಖರೀದಿ ಮಾಡಬೇಡಿ ಎಂದು. ಅದೇ ರೀತಿ ಕುರುಬ ಸಮುದಾಯ, ಹಿಂದೂ ಸಮುದಾಯದವರ ಅಂಗಡಿಗಳಲ್ಲು ಮುಸ್ಲಿಂರು ಖರೀದಿ ಮಾಡಲಿ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ. ಸಲಹೆ ಕೊಟ್ಟಿದ್ದಾರೆ ಅಷ್ಟೇ. ಸರ್ಕಾರ ಏನು ಆದೇಶ ಮಾಡಿಲ್ಲ. ಯಾರು ಕೂಡ ಇದರ ಪರವಾಗಿ ವಿರೋಧವಾಗಿ ಮಾತಾಡುವ ಅವಶ್ಯಕತೆ ಇಲ್ಲ. ಇದನ್ನ ಇಲ್ಲಿಗೆ ಕೈಬಿಡಬೇಕು ಎಂದಿದ್ದಾರೆ.

ಇನ್ನು ಕುಮಾರಸ್ವಾಮಿ ಅವರ ಗಂಡಸ್ತನದ ಹೇಳಿಕೆ ನೀಡಿದ ಬಗ್ಗೆ ಮಾತನಾಡಿ, ಸರ್ಕಾರ ಮೌನವಾಗಿಲ್ಲ. ಸಿಎಂ ಆಗಿದ್ದಂತವರು ಈ ರೀತಿಯ ಪದಪ್ರಯೋಗ ಮಾಡಬಾರದು. ಇದರಿಂದ ಸಮಾಜದ ಸಾಮರಸ್ಯ ಇನ್ನಷ್ಟು ಹಾಳಾಗುತ್ತೆ. ಅವ್ರೆ ವಿಧಾನಸಭೆಯಲ್ಲಿ ಮಾಧ್ಯಮಕ್ಕೂ ಕಿಡಿಕಾರಿದ್ದರು. ಇವತ್ತು ಸಿಎಂ ಬಗ್ಗೆನೂ ಕಿಡಿಕಾರಿದ್ದಾರೆ. ತಪ್ಪುಮಾಡಿದ್ದಾರೆ. ಸಿಎಂ ಯಾವುದೇ ಸಂಸ್ಥೆಗಳಿಗೆ ನೀವೂ ಈ ರೀತಿ ಮಾಡಿ ಅಂತ ಸೂಚನೆ ಕೊಟ್ಟಿಲ್ಲ. ನಾವುಹ ಈ ರೀತಿಯ ವಿಚಾರಗಳಿಗೆ ಸರ್ಕಾರದ ವಿರೋಧವಿದೆ. ಆಹಾರ ಪದ್ಧತಿ ಅನ್ನೋದು ಅವರವರ ವೈಯಕ್ತಿಕ ಎಂದಿದ್ದಾರೆ.


