ಯಾದಗಿರಿ: ನಿನ್ನೆಯಿಂದ ರಾಜ್ಯದಲ್ಲಿ ಮಳೆ ಶುರುವಾಗಿದೆ. ಯುಗಾದಿ ಹಿಂದೆ ಮುಂದೆ ಮಳೆ ಬೀಳುವ ವಾಡಿಕೆ ಇದೆ. ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೈಗೆ ಬರಬೇಕಾದ ಬೆಳೆ ಮಳೆಯ ನೀರಿನ ಪಾಲಾಗಿದೆ.
ರಾಜ್ಯದಲ್ಲೆಡೆ ನಿನ್ನೆ ಮಳೆಯಾಗಿದೆ. ಕೆಲವೊಂದು ಕಡೆ ಆಲಿಕಲ್ಲು ಮಳೆಯಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ ಸುರಿದಿದೆ. ಇದರ ಪರಿಣಾಮ ಮೆಣಸಿನಕಾಯಿ ಬೆಳೆ, ಪಪ್ಪಾಯ ಬೆಳೆ ನೆಲ ಕಚ್ಚಿದೆ. ಮೆಣಸಿನಕಾಯಿಯನ್ನು ಕೊಯ್ಲು ಮಾಡಿ, ಒಣಗಿ ಹಾಕಲಾಗಿತ್ತು. ಆದ್ರೆ ಬೆಳೆ ಇದ್ದ ಜಾಗದಲ್ಲೆಲ್ಲಾ ನೀರು ತುಂಬಿದೆ. ರೈತ ತಲೆಮೇಲೆ ಕೈ ಹೊತ್ತು ಕೂತಿದ್ದಾನೆ.
ಸಾಲ ಸೋಲ ಮಾಡಿ ಬೆಳೆ ಬೆಳೆಯಲಾಗಿತ್ತು. ಫಸಲು ಇನ್ನೇನು ಕೈಗೆ ಬರುವ ಹೊತ್ತು. ಎಲ್ಲಾ ನೀರು ಪಾಲಾಗಿದೆ. ಪಪ್ಪಾಯ ಬೆಳೆ ಕೂಡ ನೆಲ ಕಚ್ಚಿದೆ. ಬೆಳೆಹಾನಿ ಪ್ರದೇಶಕ್ಕೆ ಶಹಾಪುರ ಶಾಸಕ ಶರಬಸ್ಸಪ್ಪಗೌಡ ದರ್ಶನಾಪುರ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.