ಬೆಂಗಳೂರು: ಯಾವುದೋ ಒಂದು ನಂಬರ್ ಡಯೆಲ್ ಮಾಡಿ, ತಮ್ಮ ನಂಬರ್ ಅನ್ನೇ ಹ್ಯಾಕರ್ಸ್ ಗಳ ಪಾಲಿಗೆ ವರವಾಗುವಂತೆ ಮಾಡಿದವರು ನಟ ಉಪೇಂದ್ರ ಹಾಗೂ ಪ್ರಿಯಾಂಕ. ಇಂದು ಬೆಳಗ್ಗಯೇ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಕರ್ಸ್ ಗಳ ದಾಳಿಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ನಮ್ಮ ಫೋನ್ ನಂಬರ್ ನಿಂದ ಯಾರೇ ಹಣ ಕೇಳಿದ್ರು ಕೊಡಬೇಡಿ ಎಂಬ ಮಾಹಿತಿಯನ್ನ ನೀಡಿದ್ರು. ಆದ್ರೆ ಆ ಮಾಹಿತಿ ತಿಳಿ್ಉ ಸ್ನೇಹಿತರು, ಸಂಬಂಧಿಕರು ಅಲರ್ಟ್ ಆಗುವಷ್ಟರಲ್ಲಿ ಅವರ ಮಗನೇ ಹಣವನ್ನ ಕಳೆದುಕೊಂಡಿದ್ದರು. ಅದು ಒಂದಲ್ಲ, ಎರಡಲ್ಲ ಸಾವಿರಾರು ರೂಪಾಯಿ ಕಳೆದುಕೊಂಡಿದ್ದರು.
ಉಪೇಂದ್ರ ಮಗ ಆಯುಷ್ ಆ ಹ್ಯಾಕರ್ಸ್ ಗಳ ಮೋಸಕ್ಕೆ ಲಾಕ್ ಆಗಿ ಸುಮಾರು 55 ಸಾವಿರ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಉಪೆಂದ್ರ ಅವರೇ ಮಾಹಿತಿ ನೀಡಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ಈ ಸಂಬಂಧ ದೂರು ನೀಡಿದ ಉಪೇಂದ್ರ ಅವರು, ನನ್ನ ಮಗನೇ ಯಾಮಾರಿದ್ದಾನೆ. ನಮ್ಮ ನಂಬರ್ ನಿಂದ ಕೇಳಿದ ಕೂಡಲೇ 55 ಸಾವಿರ ಹಣ ಕಳುಹಿಸಿದ್ದಾನೆ. ಆಗಲೇ ಗೊತ್ತಾಗಿದ್ದು, ನಮ್ಮ ನಂಬರ್ ಹ್ಯಾಕ್ ಆಗಿದೆ ಅಂತ.
ಬರೀ ನನ್ನ ಮಗ ಮಾತ್ರವಲ್ಲ, ಆತನ ಸ್ನೇಹಿತರು ಕಳುಹಿಸಿದ್ದಾರೆ. ಅಕೌಂಟ್ ನ್ನೆಲ್ಲಾ ಬ್ಲಾಕ್ ಮಾಡಿಸಿದ್ದೇವೆ. ಅದರಿಂದ ಯಾವುದೇ ರೀತಿಯ ಡ್ರಾ ಮಾಡೋದಕ್ಕೆ ಆಗಿಲ್ಲ. ಆದ್ರೆ ಹೀಗೆ ಸ್ನೇಹಿತರಿಗೆಲ್ಲಾ ಮೆಸೇಜ್ ಮಾಡಲಾಗ್ತಾ ಇದೆ. ಯಾವುದೋ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದಾರೆ ಅಂದ್ಕೊಂಡು ಹಣ ಕಳುಹಿಸಿದ್ದಾರೆ. ಹ್ಯಾಕರ್ಸ್ ಗಳು ಒಬ್ಬೊಬ್ಬರ ಬಳಿ 45-55 ಸಾವಿರದಂತೆ ಹಣ ಕೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



