ನಾನು ಮುಂದೆ ಚುನಾವಣೆಯಲ್ಲಿ ನಿಲ್ಲಲ್ಲ. ಮಗನ ಹಣೆಬರಹ ಅವ ಏನ ಬೇಕಾದ್ರು ಮಾಡಿಕೊಳ್ಳಲಿ. ಮಗನ ಪಟ್ಟಾಭಿಷೇಕ ಮಾಡಲು ಹೋಗಿ ಅಧಿಕಾರ ಕಳೆದುಕೊಳ್ಳಲಿಲ್ವೆ. ಈಗ ಮಹಾರಾಷ್ಟ್ರದಲ್ಲಿ ಕೂಡ ಮಗನ ಆಡಳಿತದಿಂದ ಸರ್ಕಾರ ಬಿತ್ತು ಎಂದು ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಶಫರ್ಡ್ಸ್ ಇಂಡಿಯಾ ಪರವಾಗಿ ಇಟಲಿಗೆ ಹೋಗಿದ್ವಿ. ಅಲ್ಲಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ವಿ. ಅಲ್ಲಿನ ಕುರಿಗಾರರ ಬದುಕಿನ ಬಗ್ಗೆ ಸಾಕಷ್ಟು ತಿಳಿದುಕೊಂಡ್ವಿ. ಅತ್ಯಾಧುನಿಕವಾಗಿ ಹೇಗೆ ಉದ್ಯಮ ಮಾಡ್ತಾ ಇದ್ದಾರೆ. ಯಾವೆಲ್ಲ ಸಮಸ್ಯೆಗಳನ್ನು ಮೆಟ್ಟಿ ಉದ್ಯಮ ಕಟ್ಟಿದ್ದಾರೆ. ಅಲ್ಲಿನ ನಾಯಿಗಳು ಹೇಗೆ ನೂರಾರು ಕುರಿಗಳನ್ನು ಕಾಯತ್ತೇವೆ. ಈ ಎಲ್ಲ ವಿಚಾರಗಳನ್ನು ನಿಯೋಗ ಅಧ್ಯಯನ ಮಡಿದ್ದೇವೆ. ನಮ್ಮ ದೇಶದಲ್ಲಿ ಕೂಡ ಕುರಿ ಉದ್ಯಮ ಬೆಳೆಯಬೇಕು. ಇದಕ್ಕೆ ಕೇಂದ್ರ ಸರ್ಕಾರ ಕೂಡ ನೀಡಬೇಕು
ಸಿದ್ಧರಾಮೋತ್ಸವಕ್ಕೆ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಉತ್ಸವ ಅಂತ ಮಾಡಬೇಕಿತ್ತು. ಅದು ಬಿಟ್ಟು ಸಿದ್ದರಾಮಯ್ಯ ಉತ್ಸವ ಮಾಡುತ್ತಿದ್ದಾರೆ. ಶಿವಕುಮಾರ್ ಬಿಟ್ಟು ಎಲ್ಲರೂ ಸಿದ್ದರಾಮಯ್ಯ ಸರ್ಕಾರ ಅಂತಿದ್ದಾರೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಬರುತ್ತೆ ಅಂತ ಯಾರು ಹೇಳುತ್ತಿಲ್ಲ. ಈಗಾಗಲೇ ರಾಜಕೀಯ ಬೆಳವಣಿಗೆ ಪ್ರಾರಂಭವಾಗಿದೆ ಎಂದಿದ್ದಾರೆ.