Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿಎಚ್.ಎನ್.ಲೋಕೇಶ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸಿ ಪುಷ್ಪರಾಜ್ ಅವಿರೋಧವಾಗಿ ಆಯ್ಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ.25: ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ಎಚ್.ಎನ್.ಲೋಕೇಶ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸಿ. ಪುಷ್ಪರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಕನಕ ಪತ್ತಿನ ಸಂಘದ ಅಧ್ಯಕ್ಷ ಎಚ್.ಎನ್.ಲೋಕೇಶ್ ಕುಮಾರ್, ನಮ್ಮ ಮಾವನವರು ಮತ್ತು ಕನಕ ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾದ ಕೆ. ಬಿ. ರಾಮಪ್ಪನವರಿಗೆ ನಮಸ್ಕರಿಸುತ್ತಾ, ಹಾಗೂ ಸಹಕಾರ ಇಲಾಖೆಯಿಂದ ಬಂದಿರುವ ಚುನಾವಣಾ ರಿಟರ್ನಿಂಗ್ ಅಧಿಕಾರಿ ಮತ್ತು ಸಹಕಾರ ಸಂಘಗಳ ನಿರೀಕ್ಷಕರಾದ ಆತ್ಮೀಯ ಸಂಜಯ್ ರಾಮ್ ರವರಿಗೆ ಹಾಗೂ ಎಲ್ಲಾ ಆತ್ಮೀಯ ನಿರ್ದೇಶಕರುಗಳಿಗೆ ಸ್ವಾಗತ ಕೋರಿದರು.

2026-2031ಕ್ಕೆ ನಡೆದ ಮುಂದಿನ ಐದು ವರ್ಷಗಳ ಚುನಾವಣೆಯಲ್ಲಿ ನಾವೆಲ್ಲರೂ ಅವಿರೋಧವಾಗಿ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದೇವೆ. ಅದೇ ರೀತಿ ಈ ದಿನ ನನ್ನನ್ನು ಎಲ್ಲಾ ನಿರ್ದೇಶಕರುಗಳು ಸೇರಿ 2ನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಹಮತ ವ್ಯಕ್ತಪಡಿಸಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.

ನಾನು ಮುಂದಿನ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಈ ನಮ್ಮ ಕನಕ ಪತ್ತಿನ ಸಹಕಾರ ಸಂಘದಲ್ಲಿ ಹೆಚ್ಚು ಹೆಚ್ಚು ಷೇರುದಾರರನ್ನು ಸಂಘಕ್ಕೆ ಸೇರಿಸಲು ಮತ್ತು ಸಂಘದಲ್ಲಿ ವ್ಯವಹರಿಸಲು ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ. ಮತ್ತು ಸಂಘಕ್ಕೆ ಬರಬೇಕಾಗಿರುವ ಬಾಕಿ ವಸೂಲಾತಿಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಸಂಘದ ನಿರ್ದೇಶಕರುಗಳೆಲ್ಲರೂ ಪ್ರತಿ ತಿಂಗಳು ಕಡ್ಡಾಯವಾಗಿ ಮಾಸಿಕ ಸಭೆಗೆ ತಪ್ಪದೆ ಬರಬೇಕು. ನಮ್ಮ ಕನಕ ಬ್ಯಾಂಕ್ ಅಭಿವೃದ್ಧಿಗೋಸ್ಕರ ಸಲಹೆ ಸೂಚನೆಗಳನ್ನು ನೀಡಬೇಕು. ಎಲ್ಲರೂ ಒಂದುಗೂಡಿ ಬ್ಯಾಂಕಿನ ಅಭಿವೃದ್ಧಿಗೋಸ್ಕರ ಒಳ್ಳೊಳ್ಳೆಯ ಕಾರ್ಯಗಳನ್ನು ರೂಪಿಸೋಣ. ನಮ್ಮ ಬ್ಯಾಂಕಿನ ಷೇರುದಾರರು ಹೆಚ್ಚಿನ ರೀತಿಯಲ್ಲಿ ಸಂಘದಲ್ಲಿ ವ್ಯವಹಾರ ನಡೆಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ವೈಯಕ್ತಿಕ ಸಾಲ ಮತ್ತು ಜಂಟಿ ಕಂತು ಲೋನ್ ನೀಡುವುದು.

ವಸೂಲಾತಿಗೆ ಹೆಚ್ಚಿನ ಗಮನ ಹರಿಸುವುದು.

ಫಿಕ್ಸೆಡ್ ಡೆಪಾಸಿಟ್ ಮಾಡಿಸುವುದು.

ಉಳಿತಾಯ ಖಾತೆಗಳನ್ನು ಮಾಡಿಸಿ ವ್ಯವಹಾರಿಸಲು ತಿಳಿಸುವುದು.

ಪಿಗ್ಮಿ ಪ್ರಾರಂಭಿಸುವುದು.

ಇನ್ನು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬ್ಯಾಂಕನ್ನು ಅಭಿವೃದ್ಧಿಪಡಿಸಲು ಶ್ರಮಪಡುತ್ತೇನೆ. ಕೊನೆಯಲ್ಲಿ, ಎಲ್ಲ ನನ್ನ ಆತ್ಮೀಯ ನಿರ್ದೇಶಕರುಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now