ಹಾಸನ: ಜೆಡಿಎಸ್ ನ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯ ಟಿಕೆಟ್ ವಿಚಾರ ಈಗ ದೊಡ್ಡ ಗೌಡರ ಕುಟುಂದಲ್ಲಿ ಚರ್ಚೆಯ ಸುದ್ದಿಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಗೌದ=ಡರಿಗೆ ಇದೇ ಕ್ಷೇತ್ರದ ಸವಾಲು ಎದುರಾಗಿತ್ತು. ಆಗ ಮೊಮ್ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ತಾವು ಗೆಲ್ಲುವ ಕ್ಷೇತ್ರವನ್ನು ಬಿಟ್ಟುಕೊಟ್ಟು ತುಮಕೂರಿನಲ್ಲಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು.
ಇದೀಗ ಹಾಸನ ಜಿಲ್ಲೆಗೆ ಮತ್ತೆ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಕೆಲವು ದಿನಗಳಿಂದ ಭವಾನಿ ರೇವಣ್ಣ ತಾನೇ ಹಾಸನದ ಅಭ್ಯರ್ಥಿ ಎಂದು ಪರೋಕ್ಷವಾಗಿ ಅನೌನ್ಸ್ ಮಾಡಿಕೊಂಡಿದ್ದಾರೆ. ಅದಾದ ಮೇಲೆ ಟಿಕೆಟ್ ಗಾಗಿ ಸಾಕಷ್ಟು ಹರಸಾಹಸವನ್ನು ಪಡುತ್ತಿದ್ದಾರೆ. ರೇವಣ್ಣ ಅವರ ಕಡೆಯಿಂದಾನೂ ಹೇಳಿಸುತ್ತಿದ್ದಾರೆ. ಆದರೆ ಇದಕ್ಕೆ ಕುಟುಂಬದಲ್ಲಿಯೇ ವಿರೋಧ ಎದುರಾಗಿದೆ.
ಈ ಬಗ್ಗೆ ಅದಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರು ಗೆಲ್ಲುತ್ತಾರೆ. ಹೀಗಾಗಿ ಭವಾನಿ ರೇವಣ್ಣ ಅವರನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಭವಾನಿ ರೇವಣ್ಣ ಅವರಿಗೆ ಹಾಸನದಲ್ಲಿ ಟಿಕೆಟ್ ನೀಡುವ ವಿಚಾರವನ್ನು ದೇವೇಗೌಡ ಅವರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ದೇವೇಗೌಡರತ್ತ ನೆಟ್ಟಿದೆ.