ನವದೆಹಲಿ: ಜ್ಣಾನವಾಪಿ ಮಸೀದಿಯೊಳಗೆ ಹಿಂದೂ ದೇವರ ಕುರುಹಗಳಿವೆ ಎಂಬ ಸುದ್ದಿ ಹಾರಿದಾಡಿದಾಗ, ಕೋರ್ಟ್ ಒಂದು ಟೀಂ ಸಿದ್ಧ ಮಾಡಿ, ಸಮೀಕ್ಷೆ ಮಾಡಿಸಿತ್ತು. ಆ ಸಮೀಕ್ಷೆಯ ವರದಿ ಇಷ್ಟೊತ್ತಿಗೆ ಕೋರ್ಟ್ ಗೆ ಸಲ್ಲಿಕೆಯಾಗಬೇಕಿತ್ತು. ಆದರೆ ಸಮೀಕ್ಷೆ ಮಾಡಿದ್ದ ಟೀಂ ಕಾಲಾವಕಾಶ ಕೇಳಿತ್ತು. ಇದೀಗ ಇಂದು ಸಮೀಕ್ಷಾ ವರದಿ ಕೋರ್ಟ್ ಗೆ ಸಲ್ಲಿಕೆಯಾಗಿದೆ.
ಸಮೀಕ್ಷೆ ಸಮಯದಲ್ಲಿ ಸಿಕ್ಕ ಶಿವಲಿಂಗದ ಫೋಟೋ, ವಿಡಿಯೋ, ಜೊತೆಗೆ ಸಮೀಕ್ಷೆ ಕಂಡ ಎಲ್ಲಾ ಕುರುಹುಗಳ ಬಗ್ಗೆ ಸಂಪೂರ್ಣ ವರದಿ ತಯಾರಿಸಿ, ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದೆ. ವರದಿಯೂ ಸುಮಾರು 10ರಿಂದ 12 ಪುಟಗಳಿದೆ ಎನ್ನಲಾಗಿದೆ. ಸ್ಪೆಷಲ್ ಅಸಿಸ್ಟೆಂಟ್ ಕಮಿಷನರ್ ವಿಶಾಲ್ ಸಿಂಗ್ ಸರ್ವೆಯ ವರದಿಯನ್ನು ವಾರಾಣಾಸಿ ಸಿವಿಲ್ ಜಡ್ಜ್ ರವಿಕುಮಾರ್ ದಿವಾಕರ್ ಅವರಿಗೆ ಒಪ್ಪಿಸಲಾಗಿದೆ.
ಈ ವರದಿ ಬಗ್ಗೆ ಮಾತನಾಡಿರುವ ಅಮಾನತಾಗಿರುವ ಅಜಯ್ ಮಿಶ್ರಾ, ಕೋರ್ಟ್ ಆದೇಶದಂತೆ ಮೇ 6-7 ರಂದು ಸಮೀಕ್ಷೆ ನಡೆಸಲಾಗಿತ್ತು. ಯಾವುದೇ ಪಕ್ಷಪಾತವಿಲ್ಲದೆ ಸಮೀಕ್ಷೆಯ ವರದಿಯನ್ನು ಸಲ್ಲಿಸಿದ್ದೇವೆ. ಕಳೆದ ಮೂರು ದಿನದಿಂದ ನಾವೂ ನಿದ್ದೆ ಕೂಡ ಮಾಡಿಲ್ಲ ಎಂದಿದ್ದಾರೆ.