ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಇಂದು ಕೂಡ ಮಸೀದಿಗೆ ಸಂಬಂಧಿಸಿದಂತೆ ವಾದ ನಡೆದಿದೆ. ಮಸೀದಿ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ವಾದವನ್ನು ಮಂಡಿಸಿದ್ದರು. ಅವರ ವಾದ ಕೇಳಿ ಸುಪ್ರೀಂ ಕೋರ್ಟ್ ತರಾಟೆ ಕೂಡ ತೆಗೆದುಕೊಂಡಿತ್ತು. ಇದೀಗ ಮಸೀದಿ ಪ್ರಕರಣದಲ್ಲಿ ಮಹತ್ವದ ನಿರ್ಧಾರ ತಿಳಿಸಿದೆ.
ಜ್ಞಾನವಾಪಿ ಮಸೀದಿ ಕೇಸ್ ಇದೀಗ ಜಿಲ್ಲಾ ಕೋರ್ಟ್ ಗೆ ವರ್ಗಾವಣೆ ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಸೆಷನ್ ಕೋರ್ಟ್ ಸರ್ವೆ ಮಾಡಿಸಲು ಸೂಚನೆ ನೀಡಿತ್ತು. ಇದೀಗ ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜಿಲ್ಲಾ ಕೋರ್ಟ್ ಗೆ ವರ್ಗಾವಣೆ ಮಾಡಿದೆ.
ಮಸೀದಿಯೊಳಗೆ ಹಿಂದೂ ದೇವರ ವಿಗ್ರಹಗಳಿವೆ ಎಂದು ತಿಳಿದ ಮೇಲೆ ಮಸೀದಿಯೊಳಗೆ ಸರ್ವೆ ಮಾಡಿಸಿತ್ತು ಸೆಷನ್ ಕೋರ್ಟ್. ಒಂದಷ್ಟು ಭದ್ರತೆ ಒದಗಿಸಿ, ಸರ್ವೆ ಮಾಡಿಸಿತ್ತು. ನಿನ್ನೆ ಸರ್ವೆ ವರದಿಯನ್ನು ಸಮಿತಿ ಕೋರ್ಟ್ ಗೆ ನೀಡಿತ್ತು. ಆದರೆ ಈ ಸಂಬಂಧ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಇದೀಗ ಜಿಲ್ಲಾ ನ್ಯಾಯಲಯಕ್ಕೆ ಪ್ರಕರಣ ವರ್ಗಾಯಿಸಿದೆ.