ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಜು.16 : ರೋಟರಿ ಸಂಸ್ಕಾರ ಭಾರತಿ, ಚಿತ್ರದುರ್ಗ ಜಿಲ್ಲಾ ಸಮಿತಿ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಿಮಂತ ಮಹಿಳಾ ವಿಕಾಸ ಸಂಸ್ಥೆ ಮತ್ತು ವಿಶ್ವ ಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜು, ಸೀಬಾರ-ಗುತ್ತಿನಾಡು ಇವರ ಸಹಯೋಗದೊಂದಿಗೆ ಗುರು ಪೂರ್ಣಿಮೆ ಅಂಗವಾಗಿ ಶ್ರೀ ನಟರಾಜ ಪೂಜೆ ಮತ್ತು ಗುರುವಂದನಾ ಕಾರ್ಯಕ್ರಮವು ಜು. 17ರ ಬೆಳಿಗ್ಗೆ 10:30 ರಿಂದ ಚಿತ್ರದುರ್ಗ ತಾಲ್ಲೂಕಿನ ಸೀಬಾರ-ಗುತ್ತಿನಾಡು ಗ್ರಾಮದಲ್ಲಿನ ವಿಶ್ವ ಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಯುವ ವಾಗ್ನಿ, ಲೇಖಕರಾದ ಕು. ಹಾರಿಕ ಮಂಜುನಾಥ ಉಪನ್ಯಾಸ ನೀಡಲಿದ್ದಾರೆ. ಇದರೊಂದಿಗೆ ಶಿಕ್ಷಕ ಹಾಗೂ ಕಲಾಗುರುಗಳಾದ ಕೆ ಪಿ ಭೂತಯ್ಯನವರು, (ಬಯಲಾಟ) ಜಿ ಎಸ್ ಉಜ್ಜನಪ್ಪ ನವರು (ಸಾಹಿತ್ಯ) ಕೆ.ಎನ್.ಕೀರ್ತಿ ನಂಜುಂಡಸ್ವಾಮಿ (ಶಿಲ್ಪ) ಜೆ ಶಿವಲಿಂಗಪ್ಪನವರು (ಜಾನಪದ) ಎಂ ನೀಲಕಂಠದೇವರು (ಶಿಕ್ಷಣ) ಸನ್ಮಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.


