ಬೆಂಗಳೂರು: ಸರ್ಕಾರದಿಂದ ಗಣೇಶನ ಹಬ್ಬಕ್ಕೆ ಒಂದಷ್ಟು ನಿಯಮಗಳನ್ನ ಜಾರಿಗೆ ತರಲಾಗಿತ್ತು. ಗಣೇಶನ ಹಬ್ಬಕ್ಕೆ ಅನುಮತಿ ಕೊಟ್ಟರು ಷರತ್ತುಗಳನ್ನ ವಿಧಿಸಿತ್ತು. ಅದರಲ್ಲಿ ವಾರ್ಡ್ ಗೆ ಒಂದೇ ಗಣೇಶ ಎಂಬ ನಿಯಮವನ್ನು ಹೇಳಿತ್ತು. ಇದೀಗ ಆ ನಿಯಮ ಬದಲಾಗಿದೆ. ಒಂದಕ್ಕಿಂತ ಹೆಚ್ಚು ಗಣೇಶನನ್ನ ಕೂರಿಸೋದಕ್ಕೆ ಅನುಮತಿ ಸಿಕ್ಕಿದೆ.
ಈ ನಿರ್ಬಂಧ ಕುರಿತು ಇಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಫಲವಾಗಿ ಬಿಬಿಎಂಪಿ ಇದೀಗ ಆ ನಿಯಮವನ್ನ ವಾಪಾಸ್ ಪಡೆದಿದೆ.
ಹೊಸ ಮಾರ್ಗಸೂಚಿಯಲ್ಲಿ 10 ದಿನದವರೆಗೂ ಗಣೇಶನನ್ನ ಕೂರಿಸಲು ಅನುಮತಿ ನೀಡಲಾಗಿದೆ. ಇನ್ನು ವಾರ್ಡ್ ಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನನ್ನ ಕೂರಿಸಲು ಅನುಮತಿ ನೀಡಲಾಗಿದೆ.
140 ವಾರ್ಡ್ ಗಳಲ್ಲಿ ಗಣೇಶನನ್ನು ಕೂರಿಸಲು ಅರ್ಜಿ ಬಂದಿದೆ. ಉಳಿದ ಕಡೆ ದೇವಸ್ಥಾನಗಳಲ್ಲಿ ಗಣಪತಿಯನ್ನು ಕೂರಿಸಲಾಗುತ್ತಿದೆ. ರಸ್ತೆ, ಗ್ರೌಂಡ್ಗಳಲ್ಲಿ ಬೇಡಿಕೆಗೆ ತಕ್ಕಂತೆ ಗಣೇಶನನ್ನು ಕೂರಿಸಲು ಅವಕಾಶ ನೀಡಲಾಗಿದೆ. ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲು ಸರ್ಕಾರದ ಆದೇಶ ಏನಿದೆಯೋ ಅದು ಪಾಲನೆ ಆಗುತ್ತದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.