ಗುಬ್ಬಿ ಪಟ್ಟಣ ಪಂಚಾಯಿತಿ | ಅಧ್ಯಕ್ಷರಾಗಿ ಮಂಗಳಮ್ಮ ರಾಜಣ್ಣ ಉಪಾಧ್ಯಕ್ಷರಾಗಿ ಮಮತಾ ಶಿವಪ್ಪ ಅಧಿಕಾರ ಸ್ವೀಕಾರ

1 Min Read

ವರದಿ ಮತ್ತು ಫೋಟೋ ಕೃಪೆ
ರಂಗಸ್ವಾಮಿ, ಗುಬ್ಬಿ
ಮೊ : 99019 53364

ಸುದ್ದಿಒನ್, ಗುಬ್ಬಿ, ಸೆಪ್ಟೆಂಬರ್. 13 :ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಮಂಗಳಮ್ಮ ರಾಜಣ್ಣ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಮಮತಾ ಶಿವಪ್ಪ ನವರು ಇಂದು ಕಚೇರಿಗೆ ಪೂಜೆ ಸಲ್ಲಿಸಿ ಅಭಿಜಿನ್ ಲಗ್ನದಲ್ಲಿ ಅಧಿಕಾರ ಸ್ವೀಕರಿಸಿದರು.

ನಂತರ ನೂತನ ಅಧ್ಯಕ್ಷೇ ಮಂಗಳಮ್ಮ ರಾಜಣ್ಣ ಹಾಗೂ ಉಪಾಧ್ಯಕ್ಷ ಮಮತಾ ಶಿವಪ್ಪ ಮಾತನಾಡಿ ಆಯ್ಕೆಯಾದ ನಂತರ ಕಚೇರಿಗೆ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕಾರ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರ ಸಹಕಾರ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಸ್ವಚ್ಛತೆ ಮೊದಲ ಆದ್ಯತೆ ನೀಡಿ ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ಮಾಡಿ ಸಿಬ್ಬಂದಿಗಳೊಂದಿಗೆ ಸೇರಿ ಸಮಸ್ಯೆಗಳನ್ನು ಬಗ್ಗೆಹರಿಸಲು ಮುಂದಾಗುತ್ತೇನೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಹೆಲ್ತ್ ಇನ್ಸ್ಪೆಕ್ಟರ್ ವಿದ್ಯಾ ಬಡಿಗೆರೆ, ಜಿಲ್ಲಾ ಪಂಚಾಯಿತಿ, ಮಾಜಿ ಸದಸ್ಯ ಜಿಎಚ್ ಜಗನ್ನಾಥ್,ಆದಿ ಜಾಂಬವ ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಗುಬ್ಬಿ ಬಸವರಾಜು, ಪ ಪಂ ಮಾಜಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಸದಸ್ಯರಾದ ಶಿವಕುಮಾರ್, ಕುಮಾರ್, ರಾಜೇಶ್ವರಿ ರಾಜಣ್ಣ, ಸವಿತಾ ಸುರೇಶ್, ಮಹಮ್ಮದ್ ಸಾಧಿಕ್, ಸಿದ್ದರಾಮಣ್ಣ, ಜಯಲಕ್ಷ್ಮಿ, ಶ್ವೇತ ಜಗದೀಶ್, ಶಶಿಕುಮಾರ್, ನ್ಯಾಮಿನಿ ಸದಸ್ಯ ಆನಂದ್, ಮುಖಂಡರಾದ ಜಿ ಎಚ್ ಹರೀಶ್, ರಾಘವೇಂದ್ರ, ದೇವರಾಜು, ಶಿವರಾಜು, ನರಸಿಂಹಮೂರ್ತಿ, ಮುಂತಾದವರಿದ್ದರು.

Share This Article
Leave a Comment

Leave a Reply

Your email address will not be published. Required fields are marked *