ಎಸ್.ಎಸ್.ಎಲ್.ಸಿ  ಪರೀಕ್ಷೆಯಲ್ಲಿ ಗಾರ್ಡಿಯನ್ ಏಂಜಲ್ ಶಾಲೆಗೆ ಶೇ.100 ಫಲಿತಾಂಶ

ಚಿತ್ರದುರ್ಗ, (ಮೇ.21) : ನಗರದ ತರಳಬಾಳು ನಗರದಲ್ಲಿರುವ ಗಾರ್ಡಿಯನ್ ಏಂಜಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2021-22 ರ ಸಾಲಿನ  ಎಸ್ ಎಸ್  ಎಲ್ ಸಿ  ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶವನ್ನು ದಾಖಲಿಸಿದೆ .

ಶಾಲೆಯ 41 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು , 8 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು , 8  ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು, 7  ವಿದ್ಯಾರ್ಥಿಗಳು ಶೇ. 80 ಕ್ಕಿಂತ ಹೆಚ್ಚು , 3 ವಿದ್ಯಾರ್ಥಿಗಳು ಶೇ. 75 ಕ್ಕಿಂತ ಹೆಚ್ಚು , 4  ವಿದ್ಯಾರ್ಥಿಗಳು ಶೇ. 70 ಕ್ಕಿಂತ ಹೆಚ್ಚು ಹಾಗೂ ಒಬ್ಬ ವಿದ್ಯಾರ್ಥಿ ಶೇ. 66  ಅಂಕಗಳನ್ನು  ಪಡೆದು ತೇರ್ಗಡೆ ಹೊಂದಿದ್ದಾರೆ.
ಭೂಮಿಕಾ ಎಸ್ –  620,  ಶಮಿತಾ ನಾಗರಾಜ  – 619 , ಭೂಮಿಕಾ ಜಿ ಎಂ  – 618, ಶರ್ವಾಣಿ ಡಿ ಎಂ  – 618, ಚಿನ್ಮಯ್ ಜಿ –  604  , ಪ್ರಭಾಶ್ ಕುಮಾರ್ ಆರ್ –  603 , ಪೂಜಾ  ಆರ್  – 600 ಅಂಕಗಳನ್ನು ಗಳಿಸಿದ್ದಾರೆ.

ಕನ್ನಡದಲ್ಲಿ  5, ಇಂಗ್ಲಿಷ್  3, ಹಿಂದಿ  3, ಗಣಿತ  2, ವಿಜ್ಞಾನ   2, ಸಮಾಜ ವಿಜ್ಞಾನ  5  ವಿದ್ಯಾರ್ಥಿಗಳು  ಶೇ . 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ.

ಮಕ್ಕಳ ಉತ್ತಮ ಪರಿಶ್ರಮದ ಫಲಿತಾಂಶಕ್ಕೆ ಶಾಲೆಯ ಆಡಳಿತ ಮಂಡಳಿ ಸದಸ್ಯರು , ವ್ಯವಸ್ಥಾಪಕರು , ಮುಖ್ಯೋಪಾಧ್ಯಾಯರು , ಬೋಧಕ ವರ್ಗದವರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರೆಲ್ಲರೂ ಅಭಿನಂದನೆಗಳ ಮೂಲಕ ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!