Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗೃಹಲಕ್ಷ್ಮೀ ಯೋಜನೆ : ಕಂಪ್ಯೂಟರ್ ಸೆಂಟರ್‌‍ಗಳ ಮೇಲೆ ದಾಳಿ, ಮುಟ್ಟುಗೋಲು : ಯೋಜನೆ ನೊಂದಣಿಗೆ ಹಣ ಪಡೆದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ.28) : ಹೊಸದುರ್ಗ ಪಟ್ಟಣದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ನೋಂದಣಿಗೆ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳ ಲಾಗಿನ್ ಐಡಿ  ದುರ್ಬಬಳಕೆ ಮಾಡಿಕೊಂಡು, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆಯುತ್ತಿರುವ ಕಂಪ್ಯೂಟರ್ ಸೆಂಟರ್‍ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದಕ್ಕೆ ಸಹಕರಿಸಿದವರ ಲಾಗಿನ್ ಐಡಿಗಳನ್ನು ರದ್ದು ಮಾಡಿಲಾಗಿದೆ.

ಈ ಕುರಿತು  ಪತ್ರಿಕೆಗಳಲ್ಲಿ ವರದಿ ಹಾಗೂ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನಲೆಯಲ್ಲಿ, ಹೊಸದುರ್ಗ ಪುರಸಭೆ ಮುಖ್ಯ ಅಧಿಕಾರಿ, ಸಿಡಿಪಿಓ, ಪೊಲೀಸ್, ಹೊಸದುರ್ಗ ಟೌನ್ ಗ್ರಾಮ ಆಡಳಿತ ಅಧಿಕಾರಿ ಹಾಗೂ ಗ್ರಾಮ ಸಹಾಯಕರ ತಂಡ ಹೊಸದುರ್ಗ ಪಟ್ಟಣದ ಖಾಸಗಿ ಕಂಪ್ಯೂಟರ್ ಸೆಂಟರ್‍ಗಳ ಭೇಟಿ ನೀಡಿ ಪರಿಶೀಲನೆ ನಡೆಸಿತು.

ದಾಳಿಯ ವೇಳೆ ಹೊಸದುರ್ಗ ಪಟ್ಟಣದ ಜೈನ್ ದೇವಸ್ಥಾನ ಬಳಿಯ ಜನಸ್ನೇಹಿ ಕಂಪ್ಯೂಟರ್, ಎಸ್.ಜೆ.ಎಂ ಬಡಾವಣೆಯ ಮಾರುತಿ ನರ್ಸಿಂಗ್ ಹೋಂ ಹತ್ತಿರದ ಸ್ಪೂರ್ತಿ ಆನ್‍ಲೈನ್ ಸೆಂಟರ್, ಅಜ್ಜಂಪುರ ರಸ್ತೆಯ ವೈಷ್ಣವಿ ಕಂಪ್ಯೂಟರ್ ಸೆಂಟರ್‍ಗಳಲ್ಲಿ ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆ ನೊಂದಣಿ ಮಾಡಿ ಹಣ ಪಡೆಯುತ್ತಿರುವುದು ಕಂಡುಬಂತು. ತಕ್ಷಣವೇ ಕ್ರಮ ಕೈಗೊಂಡು ಕಂಪ್ಯೂಟರ್ ಸೆಂಟರ್ ಮುಟ್ಟುಗೋಲು ಹಾಕಿ, ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ದಾಳಿ ಮಾಹಿತಿ ಗೊತ್ತಾದ ಪಟ್ಟಣದ ಹಲವು ಕಂಪ್ಯೂಟರ್ ಸೆಂಟರ್ ಮಾಲಿಕರು ಅಂಗಡಿ ಮುಚ್ಚಿ, ಪರಾರಿಯಾಗಿದ್ದಾರೆ. ಈ ಸೆಂಟರ್‍ಗಳನ್ನು ಸೀಜ್ ಮಾಡಲಾಗಿದೆ.

ಅಕ್ರಮವಾಗಿ ಲಾಗಿನ್ ಐಡಿ ಬಳಕೆ : ಈ ಪ್ರಕರಣಗಳಲ್ಲಿ ಸರ್ಕಾರದಿಂದ  ಲಾಗಿನ್ ಐಡಿ ಪಡೆದ ವ್ಯಕ್ತಿಗಳು ಖಾಸಗಿ ಕಂಪ್ಯೂಟರ್ ಸೆಂಟರ್‍ಗಳಿಗೆ ಲಾಗಿನ್ ಐಡಿ ನೀಡಿ ದ್ರೋಹ ಬಗೆದಿದ್ದಾರೆ. ಇದು ಅಪರಾಧ ಕೃತ್ಯವಾಗಿದೆ. ಜನಸ್ನೇಹಿ ಕಂಪ್ಯೂಟರ್ ಸೆಂಟರ್‍ನಲ್ಲಿ ಕಬ್ಬಳ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ, ಸ್ಪೂರ್ತಿ ಆನ್‍ಲೈನ್ ಸೆಂಟರ್‍ನಲ್ಲಿ ಆನಿವಾಳ ಗ್ರಾಮ ಒನ್ ಕೇಂದ್ರ ಲಾಗಿನ್ ಐಡಿ ಹಾಗೂ ವೈಷ್ಣವಿ ಕಂಪ್ಯೂಟರ್ ಸೆಂಟರ್‍ನಲ್ಲಿ ದೊಡ್ಡಘಟ್ಟ ಗ್ರಾಮ ಒನ್ ಕೇಂದ್ರದ ಲಾಗಿನ್ ಐಡಿ ಬಳಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಪೊಲೀಸ್ ದೂರು ದಾಖಲಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಗ್ರಾಮ್ ಒನ್ ಕೇಂದ್ರಗಳ ನೋಂದಣಿ ಲಾಗಿನ್ ಐಡಿಯನ್ನು ನಿರ್ಬಂಧಿಸಿ, ಬ್ಲಾಕ್ ಲೀಸ್ಟ್‍ಗೆ ಸೇರಿಸಲಾಗಿದೆ.

ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಗೃಹಲಕ್ಷ್ಮೀ ಯೋಜನೆ ನೊಂದಣಿಗೆ ಹಣ ಪಡೆದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ನೊಂದಣಿ ಸುಗಮವಾಗಿ ನೆರವೇರುತ್ತಿದೆ. ಗ್ರಾಮಗಳಲ್ಲಿ ಗ್ರಾಮ ಒನ್, ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ನೊಂದಣಿ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳೂವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!