ಸದನದಲ್ಲಿ ಸದ್ದುಗದ್ದಲ ಎಬ್ಬಿಸಿದ ಗೃಹಲಕ್ಷ್ಮೀ ಯೋಜನೆ : ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು..?

1 Min Read
ಹೆಬ್ಬಾಳ್ಕರ್

ಬೆಳಗಾವಿ: ಇಂದು ಸದನದಲ್ಲಿ ಗೃಹಲಕ್ಷ್ಮೀ ಹಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. 1 ಕೋಟಿ 26 ಲಕ್ಷ ಗೃಹಲಕ್ಷ್ಮೀಯರ ಪ್ರಶ್ನೆ. ಬೇಸರತ್ ಕ್ಷಮೆ‌ ಕೇಳಬೇಕು. ಇಡೀ ರಾಜ್ಯದ ಸದನದ ಕ್ಷಮೆ ಕೇಳಬೇಕು ಅಂತ ಸುರೇಶ್ ಕುಮಾರ್ ಅವರು ಒತ್ತಾಯಿಸಿದ್ದಾರೆ. ಗೃಹಲಕ್ಷ್ಮೀ ಹಣ ಎಲ್ಲಿ ಹೋಯ್ತು. ಗೃಹಿಣಿಯರು ಆ ಹಣಕ್ಕಾಗಿ ಕಾಯ್ತಾ ಇದ್ದಾರೆ. ಹೀಗಿರುವಾಗ ಮಹಿಳೆಯರಿಗೆ ಯಾಕೆ ಮೋಸ ಮಾಡುತ್ತಾ ಇದ್ದೀರಿ ಎಂದು ಉತ್ತರ ನೀಡಲು ಆರ್.ಅಶೋಕ್ ಅವರು ಕೂಡ ಒತ್ತಾಯ ಮಾಡಿದ್ದಾರೆ.

ಇದಕ್ಕೆ ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ಕೂಡ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ ಹಣ ಪಾವತಿಯಲ್ಲಿ ವಿಳಂಬವಾಗಿರುವುದನ್ನು ಒಪ್ಪಿಕೊಂಡ ಅವರು, ತನಗೆ ಜವಾಬ್ದಾರಿಯ ಅರಿವಿದೆ. ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ, ಸಮಸ್ಯೆಯನ್ನು ಬಗೆಹರಿಸುತ್ತೇವೆ. ಮುಖ್ಯಮಂತ್ರಿಗಳು ಈಗಾಗಲೇ ಸದನದಲ್ಲಿ ಈ ವಿಷಯವನ್ನು ಆದಷ್ಟು ಬೇಗ ಪರಿಹರಿಸುವುದಾಗಿ ತಿಳಿಸಿದ್ದಾರೆ.

ಹಣವನ್ನು ಬೇರೆ ಕಡೆಗೆ ವರ್ಗಾಹಿಸಲಾಗಿಲ್ಲ ಹಾಗೆ ದುರುಪಯೋಗವೂ ಆಗಿಲ್ಲ‌ ಎರಡು ತಿಂಗಳ ಹಣ ಪಾವತಿಯಲ್ಲಿ ವ್ಯತ್ಯಯವಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲಾಗುವುದು. ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಹೀಗೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಬಗ್ಗೆ ಮಾತನಾಡುತ್ತಿರುವಾಗಲೇ ವಿರೋಧ ಪಕ್ಷದವರು ಕ್ಷಮೆ ಕೇಳಬೇಕು ಅಂತ ಹೇಳಿ. ವಿಷಾದ ಅಲ್ಲ ಮೊದಲು ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಸದನದಲ್ಲಿ ಹೆಚ್ಚು ಗದ್ದಲ ಎದ್ದಿದೆ.

Share This Article