ದುರಂತದಲ್ಲಿ ಬದುಕಳಿದ ಗ್ರೂಪ್ ಕ್ಯಾಪ್ಟನ್ : ಸಂಸತ್ ನಲ್ಲಿ ಘಟನೆ ಬಗ್ಗೆ ವಿವರಿಸಿದ ರಾಜನಾಥ್ ಸಿಂಗ್..!

 

ನವದೆಹಲಿ: ನಿನ್ನೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಅವರ ಪತ್ನಿ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ 13 ಮಂದಿಯೂ ದುರ್ಮರಣ ಹೊಂದಿದ್ದಾರೆ. ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ ನಲ್ಲಿ ಚಿಷಯ ಪ್ರಸ್ತಾಪಿಸಿದ್ದಾರೆ. ಮನಸ್ಸಿನಲ್ಲಿ ಅಪಾರ ದುಃಖವನ್ನಿಟ್ಟುಕೊಂಡು ನಿನ್ನೆ ನಡೆದ ದುರಂತದ ಘಟನೆಯನ್ನು ವಿವರಿಸುತ್ತಿದ್ದೇನೆ ಎಂದಿದ್ದಾರೆ.

ಹೆಲಿಕಾಪ್ಟರ್ ದುರಂತದಲ್ಲಿ ಮೊದಲ ಸಿಡಿಎಸ್ ಬಿಪಿನ್ ರಾವತ್ ನಿಧನರಾದರು. ವಾಯುಪಡೆಯ ಹೆಲಿಕಾಪ್ಟರ್ ನಿನ್ನೆ ಬೆಳಗ್ಗೆ 11.48ಕ್ಕೆ ಸುಲೂರು ಏರ್ ಬೇಸ್ ನಿಂದ ಹೊರಟಿತ್ತು. ಮಧ್ಯಾಹ್ನ 12.15ಕ್ಕೆ ವೆಲ್ಲಿಂಗ್ ಟನ್ ನಲ್ಲಿ ಇಳಿಯಬೇಕಿತ್ತು. ಆದ್ರೆ 12.8ಕ್ಕೆ ಏರ್ ಟ್ರಾಫಿಕ್ ನಿಂದಾಗಿ ಈ ದುರ್ಘಟನೆ ನಡೆದು ಹೋಗಿದೆ. ಸ್ಥಳೀಯರು ಕಾಡಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಕಂಡು, ತಕ್ಷಣ ಅಲ್ಲಿಗೆ ಬಂದಿದ್ದಾರೆ. ಅವಶೇಷಗಳಡಿ ಸಿಲುಕಿದ್ದವರನ್ನು ಮಿಲಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದ್ರೆ ದುರಾದೃಷ್ಟವಶಾತ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಅದರಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ. ಆದ್ರೆ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಈ ಘಟನೆ ಸಂಬಂಧ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ಇದರ ತನಿಖೆ ನಡೆಯಲಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *