ಕಡಲೇಬೀಜ ಮತ್ತು ಬಾದಾಮಿ ಯಾವುದರಲ್ಲಿ ಹೆಚ್ಚು ಪೋಷಕಾಂಶಗಳಿವೆ…?

1 Min Read

ನಮ್ಮ ದೇಹಕ್ಕೆ ಪೋಷಕಾಂಶ ತುಂಬಾ ಮುಖ್ಯವಾಗಿರುತ್ತದೆ. ಫೊಷಕಾಂಶ ಇಲ್ಲದೆ ಹೋದರೆ ದೇಹದ ಆರೋಗ್ಯ ಸ್ಥಿತಿ ಸಮತೋಲನದಲ್ಲಿ ಇರುವುದಿಲ್ಲ. ಹೀಗಾಗಿಯೇ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಪಡೆಯಬೇಕಾಗುತ್ತದೆ. ಅದಕ್ಕೆ ಮನೆಯಲ್ಲಿರುವ ಪದಾರ್ಥಗಳು ಸಾಕಾಗುತ್ತದೆ. ಅದರಲ್ಲೂ ಉತ್ತಮ ಪೋಷಕಾಂಶಕ್ಕಾಗಿ ಡ್ರೈ ಪ್ರೂಟ್ಸ್ ಮೊರೆ ಕೂಡ ಹೋಗುತ್ತಾರೆ. ಅದರ ಜೊತೆಗೆ ಅಡುಗೆ ಮನೆಯ ಡಬ್ಬಿಯಲ್ಲಿರುವ ಕಡಲೇ ಬೀಜವೂ(ಶೇಂಗಾ) ಉತ್ತಮ.

ಕಡಲೆ ಬೀಜವನ್ನು ಬಡವರ ಬಾದಾಮಿ ಅಂತ ಕರೆಯಲಾಗುತ್ತದೆ. ಬಾದಾಮಿಗೆ ಹೋಲಿಕೆ ಮಾಡಿದ್ರೆ ಇದರ ಕಡಲೆ ಬೀಜದ ಬೆಲೆ ತುಂಬಾನೇ ಕಡಿಮೆ. ತಿನ್ನೋದಕ್ಕೂ ರುಚಿಕರವಾಗಿರುತ್ತೆ. ಕಡಲೆಕಾಯಿಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಇದು ಸಸ್ಯಾಹಾರಿಗಳು ಮತ್ತು ವೀಗನ್ ಆಹಾರ ಕ್ರಮ ಪಾಲಿಸುವವರಿಗೆ ಅತ್ಯುತ್ತಮವಾದ ಸಸ್ಯ ಆಧಾರಿತ ಪ್ರೋಟೀನ್ ಮೂಲವಾಗಿದೆ. ಇದರಲ್ಲಿ ಮಾನವನ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ.

ಬಾದಾಮಿಯನ್ನು ವೈಜ್ಞಾನಿಕವಾಗಿ ಪ್ರುನಸ್ ಡಲ್ಸಿಸ್ ಎಂದು ಕರೆಯಲಾಗುತ್ತದೆ. ಇದನ್ನು ಶತಮಾನಗಳಿಂದ ಸೇವಿಸಲಾಗುತ್ತಿದೆ. ಹಾಗೂ ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ. ಬಾದಾಮಿಯು ವಿವಿಧ ಫೈಟೊನ್ಯೂಟ್ರಿಯೆಂಟ್‌ಗಳನ್ನು ಹೊಂದಿರುತ್ತದೆ. ಬಾದಾಮಿಯು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಪ್ರಯೋಜನಕಾರಿಯಾಗಿದೆ. ಬಾದಾಮಿಯಲ್ಲಿ ವಿಟಮಿನ್ ಇ ಹೇರಳ ಪ್ರಮಾಣದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *