ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್, 09 : ನಗರದ ಪ್ರತಿಷ್ಟಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಅಜ್ಜಿ ತಾತಂದಿರ” ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಅಜ್ಜ – ಅಜ್ಜಿ ಎಂಬ ಪದಗಳೇ ಅಚ್ಚರಿ, ತಾತನ ಅಪ್ಪುಗೆ, ಅಜ್ಜಿ – ಕಥೆ, ಪ್ರಪಂಚದಲ್ಲಿ ಜನಮಾನಸದಲ್ಲಿ ಸರಿ ಸಾಟಿಯೇ ಇಲ್ಲ ಅಪ್ಪನ ಗದರುವಿಕೆ ತಾತನ ರಕ್ಷಣೆ ತಾಯಿಯ ಒಡೆತಕ್ಕೆ ಅಜ್ಜಿಯ ಮಧ್ಯಸ್ಥಿಕೆ ಈ ವಿಚಾರಗಳು ಪ್ರತೀ ಮನೆಗಳಲ್ಲೂ ನಿಲ್ಲದ ನಿರಂತರ ಚಟುವಟಿಕೆಗಳು.
ಅಜ್ಜಿ ತಾತ ಮೊಮ್ಮಕ್ಕಳ ನಂಟು ಬಿಡಿಸಲಾರದ ಗಂಟು ತಂದೆ ತಾಯಿಗಳ ಮಮತೆ ಅಕ್ಕರೆ ಒಂದೆಡೆಯಾದರೆ ಪ್ರೀತಿ ವಾತ್ಸಲ್ಯ ಮಮತೆ ಕರುಣೆ ಈ ಪದಗಳ ಪ್ರತಿ ರೂಪವೇ ಅಜ್ಜಿ ತಾತಂದಿರು.
ಇಂತಹ ಇಳಿಯವಸ್ಸಿನಲ್ಲಿ ಅಜ್ಜಿ ತಾತಂದಿರ ದಿನಾಚರಣೆಯಲ್ಲಿ ಭಾಗವಹಿಸಿ ತಮ್ಮ ಮೊಮ್ಮಕ್ಕಳ ಮುಖದಲ್ಲಿ ಮಂದಹಾಸ ಬೀರಿಸಿದ ಸುದಿನ ಈ ದಿನದಂದು ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ||.ಸ್ವಾಮಿ.ಕೆ.ಎನ್ ಅವರು ನೆರವೆರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಅಜ್ಜಿ ತಾತಂದಿರಿಗೆ ನಿಮ್ಮ ಮೊಮ್ಮಕಳಿಗೆ ಬಹಳ ಸಲಿಗೆ ಕೊಡಬಾರದು, ಹೆಚ್ಚು ಮುದ್ದು ಮಾಡುವುದರಿಂದ ಮೊಮ್ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚು ಅದ್ದರಿಂದ ಮೊಮ್ಮಕ್ಕಳಿಗೆ ಪ್ರೀತಿ ಕರುಣೆ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡಬೇಕು, ಮೊಬೈಲ್‍ಗಳನ್ನು ಕೊಡಬಾರದು ಎಂಬ ಕಿವಿ ಮಾತು ಹೇಳಿದರು.
ನಂತರ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ನಿರ್ಮಲ ಅವರು ಅವರು ಮಾತನಾಡುತ್ತಾ ಮೊಮ್ಮಕ್ಕಳಿಗೆ ಅಜ್ಜಿ ತಾತಂದಿರು ಎಂದರೆ ತುಂಬಾ ಅಚ್ಚು ಮೆಚ್ಚು, ಅದ್ದರಿಂದ ಅಜ್ಜಿ ತಾತಂದಿರು ತಮ್ಮ ಮೊಕ್ಕಳಿಗೆ ಊಟ ಮಾಡಿಸುವುದು, ಸ್ನಾನ ಮಾಡಿಸುವುದು ಆಟ, ಪಾಠ ಹಾಗೂ ನಿದ್ರೆ ಇತ್ಯಾದಿಗಳನ್ನು ಮಾಡಿಸುವುದರ ಮೂಲಕ ನಾವು ಅವರ ಜೊತೆಯಲ್ಲಿ ಕಾಲ ಕಳೆಯುತ್ತೇವೆ ಎಂದರು.
ಹಾಗೂ ಮತ್ತೊಬ್ಬ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ರಮೇಶ್ ರಾವ್ ಅವರು ಮಾತನಾಡುತ್ತಾ ಕಾಲ ಬದಲಾದಂತೆ ಕುಟುಂಬದ ವ್ಯವಸ್ಥೆಯು ಬದಲಾಗುತ್ತಿದೆ. ಈಗಿನ ಅಧುನಿಕ ಕಾಲದಲ್ಲಿ ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಇಳಿವಯಸ್ಸಿನಲ್ಲಿ ಹಿರಿಯರಿಗೆ ಮೊಮ್ಮಕ್ಕಳ ಆಸರೆ ಬೇಕು ಆದರೆ ಈಗಿನ ಮೊಮ್ಮಕ್ಕಳು ಬೆಳದು ದೊಡ್ಡವರಾದ ನಂತರ ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲ. ಅವರು ತಮ್ಮದೇ ಆದ ಪ್ರತ್ಯೇಕ ದಾರಿಯಲ್ಲಿ ನಡೆಯುತ್ತಾರೆ. ನಮ್ಮ ಮಕ್ಕಳಲ್ಲಿರುವ ಭಾವನೆ ಬದಲಾಗಬೇಕು ತಂದೆ ತಾಯಿರು ಇಲ್ಲದೆ ಮಕ್ಕಳಿಲ್ಲ ಎಂಬ ಭಾವನೆ ಈಗಿನ ಯುವ ಪೀಳಿಗೆಗೆ ಅರ್ಥ ಮಾಡಿಕೊಳ್ಳಬೇಕು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಜ್ಜಿ – ತಾತಂದಿರ ವೇಷ ಧರಿಸಿ ಸಂಭ್ರಮಿಸಿದರು, ಹಾಗೂ ಬಣ್ಣ ಬಣ್ಣದ ಉಡುಗೆ ತೊಟ್ಟು, ನೃತ್ಯ ಮಾಡಿ ಹಿರಿಯರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ.ಸಿ.ಡಿ.ಸಂಪತ್‍ಕುಮಾರ್ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.