ಹಾವೇರಿ: SDPI, PFI ಸಂಘಟನೆಗಳ ಮೇಲಿನ ದಾಳಿ ಇನ್ನು ಮುಂದುವರೆದಿದೆ. ದೇಶಾದ್ಯಂತ ದಾಳಿ ನಡೆಸುತ್ತಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಬಿ ಸಿ ಪಾಟೀಲ್, SDPI, PFI ನಿಷೇಧದ ಬಗ್ಗೆ ಸರ್ಕಾರ ತೀರ್ಮಾನಿಸುತ್ತದೆ. ಇದರಲ್ಲಿ ಲಾಭ ನಷ್ಟದ ಪ್ರಶ್ನೆಯೇ ಇಲ್ಲ ಎಂದು ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.
ಈಗ ದೇಶ ಉಳಿಸುವುದು, ಶಾಂತಿ ಕಾಪಾಡುವುದು ಮುಖ್ಯವಾಗಿದೆ. ಲಾಭ ನಷ್ಟದ ಬಗ್ಗೆ ಚಿಂತನೆ ಮಾಡೋ ಅವಶ್ಯಕತೆ ಇಲ್ಲ ಎಂದು ಹಾವೇರಿಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಇನ್ನು ಪೇಸಿಎಂ ಅಭಿಯಾನಕ್ಕೆ ಕಿಡಿಕಾರಿದ ಬಿ ಸಿ ಪಾಟೀಲ್, ಕಾಂಗ್ರೆಸ್ ನವರು ಎಷ್ಟು ಸತ್ಯಹರಿಶ್ಚಂದ್ರರೆಂದು ನೋಡಿಕೊಳ್ಳಲಿ. ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿನಿಂದ ಅಪಪ್ತಚಾರ ಮಾಡಿಕೊಂಡೆ ಬರುತ್ತಿದ್ದಾರೆ. ಆದರೆ ಸಿಎಂ ಯಶಸ್ವಿಯಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. 15 ಗಂಟೆಗಳ ಕಾಲ ಕೆಲಸ ಮಾಡಿ, ಜನಾನುರಾಗಿಯಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ನವರಿಗೆ ಭಯ ಹುಟ್ಟಿದೆ ಎಂದಿದ್ದಾರೆ.