ಅಬಕಾರಿ ಡಿಸಿ ನಾಗಶಯನ ಬೇನಾಮಿ ಆಸ್ತಿಯ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಲಿ : ಜಿ.ಟಿ.ಬಾಬುರೆಡ್ಡಿ

suddionenews
2 Min Read

ಚಿತ್ರದುರ್ಗ, (ಮೇ.11) : ಗೋಮುಖ ವ್ಯಾಘ್ರ, ಹಣದ ಪಿಶಾಚಿಯಂತಿರುವ ಅಬಕಾರಿ ಡಿಸಿ ನಾಗಶಯನ ಅವರ ಬೇನಾಮಿ ಆಸ್ತಿಯ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ವಶಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಗೆ ಅಬಕಾರಿ ಡಿಸಿ ಆಗಿ ಬಂದಂದತಹ ನಾಗಶಯನ ಅವರು ಸನ್ನದುದಾರರ ಮೇಲೆ ಯಾವುದೇ ತಪ್ಪುಗಳು ಇಲ್ಲದೆ ಇದ್ದರೂ ಕೂಡ ಸುಖಾಸುಮ್ಮನೆ ಕೇಸುಗಳನ್ನು ಹಾಕಿ, ನಮ್ಮನ್ನು ಶೋಷಣೆ ಮಾಡುತ್ತಿದ್ದರು. ಇವರು ಹಿಂದೆ ಕೆಲಸ ಮಾಡಿದಂತಹ ಜಿಲ್ಲೆಗಳಲ್ಲೂ ಸಹ ಇದೇ ರೀತಿ ಭ್ರಷ್ಟತನದಿಂದ ಕೂಡಿದ್ದು,  ಅಲ್ಲಿನ ಜನರು ಕೂಡ ಪ್ರತಿಭಟನೆಗಳನ್ನು ಮಾಡಿ ಅಲ್ಲಿಂದ ಹೊರದಬ್ಬಿದ್ದರು. ಆದರೂ ಕೂಡ ಇದು ಯಾವುದಕ್ಕೂ ಅಂಜದೆ ಚಿತ್ರದುರ್ಗ ಜಿಲ್ಲೆಯಲ್ಲಿ ಸನ್ಮದುದಾರರನ್ನು ಮನಬಂದಂತೆ ಬಳಸಿಕೊಂಡು ಹಣ ವಸೂಲಿ ಮಾಡಿದ್ದಾರೆ ಎಂದು ದೂರಿದರು.

ಸನ್ನದುದಾರರಿಗೆ ಬರುತ್ತಿದ್ದ 10% ಲಾಭದಲ್ಲಿ 8% ಹಣವನ್ನು ಡಿಸಿ ನಾಗಶಯನಿಗೆ ಕೊಡಬೇಕಿತ್ತು. ಇಲ್ಲದಿದ್ದರೆ ಬಾರ್‌ಗಳ ಲೈಸೆನ್ಸ್ ಅಮಾನತ್ತು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಯಾರಾದರೂ ಪ್ರಶ್ನೆ ಮಾಡಿದರೆ ನನ್ನ ಹೆಂಡತಿ ಪೊಲೀಸ್ ಎಸ್ಪಿ ಆಗಿದ್ದು, ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು.

ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿಕೊಳ್ಳುತ್ತಿರಲಿಲ್ಲ. ಅಬಕಾರಿ ಕಾಯ್ದೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಇದರಿಂದ ಬಹಳದಿನಗಳ ಕಾಲ ನೊಂದು ನಿನ್ನೆ ಎಸಿಬಿ ಪೊಲೀಸರಿಗೆ ದೂರು ನೀಡಿ ನಾಗಶಯನ ಅವರನ್ನು ಬಂಧಿಸಲಾಯಿತು. ಇವರು ಇದುವರೆಗೂ ಮಾಡಿರುವ ಹಣ ಬೇನಾಮಿ ಆಸ್ತಿಯ ಬಗ್ಗೆ ಸರ್ಕಾರ ಎಸಿಬಿ ಪೊಲೀಸರಿಂದಲೇ ತನಿಖೆ ಮಾಡಿಸಿ ಜಪ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಅಬಕಾರಿ ಅಧಿಕಾರಿಗಳು ಸುಲಿಗೆ ಮಾಡಲು ಭರುತ್ತಿದ್ದಾರೆ. ಚಿತ್ರದುರ್ಗದಲ್ಲಿ ನಿನ್ನೆ ಮಾಡಿರುವ ಎಸಿಬಿ ಟ್ರಾಫ್ ಪ್ರಾರಂಭ ಅಷ್ಟೇ ಇದು ಮುಂದಿನ ಜಿಲ್ಲೆಗಳಲ್ಲಿರುವ ಭ್ರಷ್ಟ ಅಧಿಕಾರಿಗಳ ಮೇಲೂ ಕೂಡ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ಗೋವಿಂದರಾಜು ಹೆಗಡೆ, ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ, ಪ್ರಸನ್ನಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *