ಚಿತ್ರದುರ್ಗ, (ಅ.16) : ಪುಣ್ಯಕೋಟಿ ಯೋಜನೆಗೆ ಸರ್ಕಾರದ ಹಣ ನೀಡುವುದಕ್ಕೆ NPS ಸಂಘದ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ನೌಕರರ ಪ್ರಮುಖ ಬೇಡಿಕೆ NPS ರದ್ದುಪಡಿಸಿ, ಹಳೆಯ ಪಿಂಚಣಿ (OPS) ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡರೆ ಒಂದು ತಿಂಗಳ ವೇತನ ಪುಣ್ಯ ಕೋಟಿ ಯೋಜನೆಗೆ ನೀಡಲು ಸಿದ್ದರಿದ್ದೇವೆ ಎಂದು NPS ನೌಕರರ ಸಂಘದ ಅಧ್ಯಕ್ಷ ಡಾ.ಎಸ್.ಆರ್.ಲೇಪಾಕ್ಷ ತಿಳಿಸಿದ್ದಾರೆ.
ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನದಲ್ಲಿ ಎ ಗುಂಪಿನ ಅಧಿಕಾರಿಗಳು.11000, ಬಿ ಗುಂಪಿನ ಅಧಿಕಾರಿ,4000 ಹಾಗೂ ಸಿ ವೃಂದದ ಅಧಿಕಾರಿಗಳು 400 ನೌಕರರ ವೇತನದಲ್ಲಿ ಕಟಾವು ಮಾಡಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದೇಶ ಹಾಗೂ ರಾಜ್ಯದ ಜನತೆ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಬಾರಿ ತಮ್ಮ ವೇತನದಲ್ಲಿ ಹಣವನ್ನು ಸರ್ಕಾರಕ್ಕೆ ನೀಡಿದ್ದಾರೆ. ಈಗಾಗಲೇ NPS ನೌಕರರ ಕಟಾವಿನ ಹಣ ಬಿಟ್ಟು ಸರ್ಕಾರದ ವಂತಿಗೆ 2500 ಕೋಟಿಗೂ ಅಧಿಕ ಹಣ,ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ದರಿದ್ದಾರೆ.ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಲಿ.ಈಗಾಗಲೇ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ NPS ನೌಕರರು ಯಾವುದೇ ಕಾರಣಕ್ಕೂ ಹಣ ಕಟಾವು ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಹಾಗೂ ಮುಂದಿನ ದಿನಗಳಲ್ಲಿ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಈಗಾಗಲೇ ರಾಜ್ಯ NPS ನೌಕರರ ಸಂಘ ಕರೆ ಕೊಟ್ಟಿದ್ದು ಅದರ ಪೂರ್ವ ತಯಾರಿ OPS ಸಂಕಲ್ಪ ಯಾತ್ರೆ ರಾಜ್ಯಾದ್ಯಂತ ಸಂಚಾರ ಮಾಡುತ್ತಿದೆ ಎಂದು NPS ನೌಕರರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ, ವಿವಿಧ ತಾಲ್ಲೂಕು ಅಧ್ಯಕ್ಷರು ಪ್ರಭು,ರಾಜಣ್ಣ,ಕಾರ್ಯದರ್ಶಿ ಸುರೇಶ್, ಶಿವಣ್ಣ,ಕಲ್ಲೇಶ್ ಮೌರ್ಯ,ಕೋಮಲ್,ಪ್ರದೀಪ್ ಕುಮಾರ್,ಮಮತ,ವಿನಯ್ ಹಾಗೂ ಆನೇಕ ಪದಾಧಿಕಾರಿಗಳು, ನೌಕರರು ಹಾಜರಿದ್ದರು.