ಸರ್ಕಾರಿ ನೌಕರರು ಗೈರು ಹಾಜರಾಗಿ, ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಬೆಂಬಲಿಸಿ : ಗುಂಡಪ್ಪ ನವರ ನಾಗರಾಜ

suddionenews
1 Min Read

 

ಕುರುಗೋಡು. (ಫೆ.23) : ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸಿ, ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುರುಗೋಡು ತಾಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ್  ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ಕಾರಿ ನೌಕರರ ಸಂಘ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಪಡಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಭತ್ಯಗಳ ಪರಿಷ್ಕರಿಸಬೇಕು, 7ನೇ ವೇತನಾ ಆಯೋಗ ಜಾರಿಗೊಳಿಸಬೇಕು. ಇತ್ತೀಚಿನ ರಾಜ್ಯದ ಕೊನೆಯ ಬಜೆಟ್ ನಲ್ಲಿ ಪ್ರಸ್ತಾಪವಿಲ್ಲದಿರುವುದು ನಿರಾಸೆ ಮೂಡಿಸಿದಂತಾಗಿದೆ. ಈ ಹಿನ್ನಲೆಯಲ್ಲಿ ಮಾರ್ಚ್‌1 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಮಾರ್ಚ್ 1ರಿಂದಲೇ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರವನ್ನು ಬೆಂಬಲಿಸುವುದರೊಂದಿಗೆ ಯಶಸ್ವಿಗೊಳಿಸಲು ತಿಳಿಸಿದರು.

ಇದೇ ವೇಳೆ ಅನಿರ್ದಿಷ್ಟಾವಧಿ ಮುಷ್ಕರದ ಬಿತ್ತಿ ಪತ್ರಗಳನ್ನು ಬಿತ್ತರಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ. ಮಂಜುನಾಥ, ಖಜಾಂಚಿ  ಬಿ. ರಾಮು,
ಪ್ರೌಢ ಶಾಲಾ ಸಂಘದ ಅಧ್ಯಕ್ಷ ಮಾರುತಿ ಗಾಳಿ,ಪ್ರಾ.ಶಾ.ಸಂಘದ ಅಧ್ಯಕ್ಷ ತುಕಾರಾಂ ಗೊರವ,ಪಿಡಿಓ ಸಂಘದ ಅಧ್ಯಕ್ಷ ರಾಮಲಿ,ಆರ್ ಡಿ ಪಿ ಆರ್ ಸಂಘದ ಅಧ್ಯಕ್ಷ ಎ. ಮಂಜುನಾಥ್,ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ರಾಜೇಂದ್ರ ದೊರೆ,ಕಸಾಪ ಅಧ್ಯಕ್ಷ ನಾಗರಾಜ್ ಮಸೂತಿ,ಗೌರವ ಅಧ್ಯಕ್ಷ ಟಿ. ಎಂ. ಮೃತ್ಯುಜಯ,ಚಿನ್ನ ಬೋರನಾಯಕ ಸೇರಿದಂತೆ ಸರಕಾರಿ ಸಂಘ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘ ಮತ್ತು ಎನ್ ಪಿ ಎಸ್ ಸಂಘ ಸೇರಿದಂತೆ ಇತರ ಸಂಘಟನೆಯ ಪದಾಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *