ಲಕ್ನೋ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ 18 ರಿಂದ 21ಕ್ಕೆ ಏರಿಕೆ ಮಾಡಲಾಗಿದೆ. ಈ ಸಂಬಂಧ ಕೆಲವು ವಿರೋಧಗಳು ವ್ಯಕ್ತವಾಗಿದ್ದು, ಆ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಈ ನಿರ್ಧಾರವನ್ನ ವಿರೋಧಿಸುತ್ತಿರುವವರು ಹಾಗೂ ಹೆಣ್ಣು ಮಕ್ಕಳ ವಿಧ್ಯಾಭ್ಯಾಸವನ್ನ ತಡೆಯುತ್ತಿರುವವರು ಯಾರೆಂದು ತಿಳಿದಿದೆ ಎಂದಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಿಸಿದ್ದಕ್ಕೆ ಹೆಣ್ಣು ಮಕ್ಕಳೇ ಖುಷಿ ಪಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿಧ್ಯಾಭ್ಯಾಸ ಸಿಗಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದು. ಮನೆಯ ಮಗಳಿಗಾಗಿ ದೇಶ ಈ ನಿರ್ಧಾರ ಕೈಗೊಂಡಿದೆ.
ಉತ್ತರ ಪ್ರದೇಶದ ಕೆಲ ರಸ್ತೆಗಳಲ್ಲಿ ಮಾಫಿಯಾ ನಡೆಯುತ್ತಿತ್ತು. ಆ ರಸ್ತೆಗಳಿಂದ ಹಾದು ಹೋಗಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟಕರವಾಗಿತ್ತು. ಇದೀಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಅದೆಲ್ಲವನ್ನು ತಡೆದಿದ್ದಾರೆ. ಹೀಗಾಗಿ ಆ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದಿದ್ದಾರೆ.