ಸರ್ಕಾರಿ ವೃತ್ತಿ.. 40 ಸಾವಿರ ಸಂಬಳ.. ಹಣದ ಆಸೆಗೆ ಯುವಕರಿಗೆ ಮದುವೆ ಹೆಸರಲ್ಲಿ ಪಂಗನಾಮ : ಕೋಮಲ ಅರೆಸ್ಟ್..!

suddionenews
1 Min Read

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ಸಾಕಷ್ಟು ಯುವಕರಿಗೆ ಒದಗಿ ಬರುವುದೇ ಸಂಕಷ್ಟವಾಗಿದೆ. ಹುಡುಗಿಯರೇ ಸಿಗುತ್ತಿಲ್ಲ ಎಂಬ ಅರೋಪವಿದೆ. ಹೀಗಿರುವಾಗ ಹುಡುಗಿ ಸಿಕ್ಕರೆ ಸಾಕು ಎಂಬ ಮನಸ್ಥಿತಿಯವರೇ ಹೆಚ್ಚು. ಅಂತವರೇ ಈ ಸುಂದರಿಯ ಟಾರ್ಗೆಟ್. ಈಗಾಗಲೇ ಮದುವೆಯಾಗಿರುವ ಕೋಮಲಾ, ನಿಮ್ಮನ್ನ ಮದುವೆ ಆಗ್ತೀನಿ ನಿಮ್ಮನ್ನ ಮದುವೆ ಆಗ್ತೀನಿ ಅಂತ ಯಾಮಾರಿಸಿದ್ದಾಳೆ. ಲಕ್ಷ ಲಕ್ಷ ಹಣವನ್ನು ಪೀಕಿದ್ದಾಳೆ. ಇದೀಗ ಪೊಲೀಸರಿಗೆ ಅತಿಥಿಯಾಗಿದ್ದಾಳೆ.

ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಕೆಲಸದಲ್ಲಿದ್ದ ಕೋಮಲ ಮಹಿಳೆ ಮ್ಯಾಟ್ರಿಮೋನಿ ಅಪ್ಲಿಕೇಷನ್ ನಲ್ಲಿ ಗಂಡಸರಿಗೆ ಗಾಳ ಹಾಕಿ ಪಂಗನಾಮ ಹಾಕುತ್ತಿದ್ದಳು. ಮ್ಯಾಟ್ರಿಮೋನಿಯಲ್ಲಿ ಸಿಕ್ಕ ಗಂಡಸರೊಂದಿಗೆ ಮದುವೆಯಾಗಿ ಎರಡು ತಿಂಗಳು ಸಂಸಾರವನ್ನು ಮಾಡಿ, ಹಣ‌ತೆಗೆದುಕೊಂಡು ಎಸ್ಕೇಪ್ ಆಗುತ್ತಿದ್ದಳು. ಆರೋಪಿ ಮಹಿಳೆ ಕೋಮಲ ಗವಬರಿಬಿದನೂರಿನ ರಾಘವೇಂದ್ರ ಎಂಬುವವರಿಗೆ ಬರೀ 15 ದಿನದಲ್ಲಿ ಅವರ ಬಳಿ 7 ಲಕ್ಷ 40 ಸಾವಿರ ಹಣ ಪಡೆದುಕೊಂಡಿದ್ದಾಳೆ. ಈ ಸಂಬಂಧ ರಾಘವೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧನದ ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಹಲವು ಮೋಸಗಳು ಹೊರಗೆ ಬಂದಿವೆ. ಬೆಂಗಳೂರಿನ ನಾಗಾರಾಜ್ ಎಂಬುವವರಿಂದಾನೂ 1 ಲಕ್ಷದ 50 ಸಾವಿರ ಹಣವನ್ನು ತನ್ನ ಅಕೌಂಟ್ ಗೆ ಹಾಕಿಸಿಕೊಂಡಿದ್ದಾಳೆ. ತಾವರೆಕೆರೆ ಮೂಲದ ಮಧು ಎಂಬಾತನನ್ನು ಮದುವೆಯಾಗಿ ಎರಡು ತಿಂಗಳ ಬಳಿಕ ಎಸ್ಕೇಪ್ ಆಗಿದ್ದಾಳೆ. ಎಸ್ಕೇಪ್ ಆಗುವಾಗ 70 ಸಾವಿರ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾಳೆ. ಸದ್ಯ ಚಿಕ್ಕಬಳ್ಳಾಪುರದ ಪೊಲೀಸರ ಅತಿಥಿಯಾಗಿದ್ದು, ಎಲ್ಲಾ ಮೋಸಗಳನ್ನು ಪೊಲೀಸರು ಹೊರಗೆ ತರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *