ಬೆಂಗಳೂರು: ನಾಳೆ ವಿಶೇಷ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿ ಹಾಕುವುದಕ್ಕೆ ವಿಪಕ್ಷಗಳು ಕೂಡ ಎಲ್ಲಾ ತಯಾರಿ ನಡೆಸಿಕೊಂಡಿವೆ. ಕೇಂದ್ರದ ವಿರುದ್ಧ ತರಾಟೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಕೂಡ ರೆಡಿಯಾಗಿದೆ. ಇದರ ನಡುವೆ ರಾಜ್ಯ ಪಾಲರು ಅಧಿವೇಶನ ಉದ್ದೇಶಿಸಿ ಭಾಷಣ ಮಾಡವುದಕ್ಕೆ ನಿರಾಕರಣೆ ತೋರಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಹೊಸ ತಲೆ ನೋವಾಗಿದೆ.
ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲೂ ಇದೇ ಸಮಸ್ಯೆ ಇದೆ. ರಾಜ್ಯಪಾಲರು ವರ್ಸಸ್ ರಾಜ್ಯ ಸರ್ಕಾರ ಎಂಬ ಸ್ಪರ್ಧೆ ಇದೆ. ಕರ್ನಾಟಕದಲ್ಲೂ ಅದು ಎದ್ದು ಕಾಣಿಸ್ತಾ ಇದೆ. ಈ ಹಿಂದೆಯೂ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಈ ರೀತಿಯ ಸಂದರ್ಭ ಎದುರಾಗಿತ್ತು. ಈ ಹಿಂದೆ ಹೆಚ್.ಆರ್. ಭಾರಧ್ವಾಜ್ ರಾಜ್ಯಪಾಲರಾಗಿದ್ದಾಗಲೂ ರಾಜ್ಯಪಾಲರು ಹಾಗೂ ಬಿಜೆಪಿ ರಾಜ್ಯ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿತ್ತು. ಈಗ ಮತ್ತೆ ಅದು ಪುನರಾವರ್ತನೆಯಾಗುತ್ತಿದೆ.
ಕೇಂದ್ರದ ಕಾಯ್ದೆ ವಿರೋಧಿಸಿ ಖಂಡನಾ ನಿರ್ಣಯ ಕೈಗೊಳ್ಳುವ ಅಧಿವೇಶನವನ್ನು ಉದ್ದೇಶಿಸು ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಹೀಗಾಗಿ ನಾಳಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಕಾನೂನು ಸಚಿವರ ನೇತೃತ್ವದ ಉನ್ನತಮಟ್ಟದ ನಿಯೋಗ ರಾಜ್ಯಪಾಲರನ್ನ ಮನವೊಲಿಸುವ ಕೆಲಸ ಮಾಡಲಿದೆ. ಮನರೇಗಾ ಕಾನೂನು ಬದಲಾವಣೆ ಮಾಡಿ, ವಿಬಿ ರಾಮ್ ಜಿ ಕಾಯ್ದೆ ತಂದಿರುವುದು ವಿರೋಧಿಸಿ ಖಂಡನಾ ನಿರ್ಣಯ ಕೈಗೊಳ್ಳಲು ವಿಶೇಷ ವಿಧಾನಸಭಾ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನಕ್ಕೆ ರಾಜ್ಯಪಾಲರು ಭಾಷಣ ಮಾಡಲ್ಲ ಎಂದಿದ್ದಾರೆ.






