ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜ.20): ಗಡಿ ಭಾಗದ ಜನರ ಸಮಸ್ಯೆಗಳನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಗಡಿ ಭಾಗಗಳಲ್ಲಿ ಜಾನಪದ ಸಂಗೀತೋತ್ಸವ ಕಾರ್ಯಕ್ರಮಗಳನ್ನು ಸರ್ಕಾರ ನಡೆಸಿಕೊಂಡು ಬರುತ್ತಿದೆ ಎಂದು ಮೊಳಕಾಲ್ಮುರು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ವೆಂಕಟೇಶಪ್ಪ ತಿಳಿಸಿದರು.
ಕರ್ನಾಟಕ ಪ್ರದೇಶ ಗಡಿ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು, ಮಾರುತಿ ಸಾಂಸ್ಕೃತಿಕ ಕಲಾ ಸಂಘ ಆಯಿತೋಳು ಹಾಗೂ ಕೋನಸಾಗರ ಗ್ರಾಮ ಪಂಚಾಯಿತಿ ಇವುಗಳ ಸಹಯೋಗದೊಂದಿಗೆ ಕೋನಸಾಗರದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಾನಪದ ಸಂಗೀತೋತ್ಸವ ಉದ್ಘಾಟಸಿ ಮಾತನಾಡಿದರು.
ಗ್ರಾಮೀಣ ಭಾಗದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಿ ಗಡಿ ಭಾಗದ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಸರ್ಕಾರದ ಉದ್ದೇಶವಾಗಿರುವುದರಿಂದ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಜಾನಪದ ಕಲಾವಿದ ಡಿ.ಓ.ಮುರಾರ್ಜಿ ಮಾತನಾಡಿ ಜಾನಪದ ಸಂಗೀತೋತ್ಸವ ನಿಜವಾಗಿಯೂ ಹುಟ್ಟಿಕೊಂಡಿದ್ದು, ಗ್ರಾಮೀಣ ಭಾಗದಿಂದ ಹಾಗಾಗಿ ಗ್ರಾಮೀಣ ಜನರು ಗಡಿ ಭಾಗಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಜಾನಪದ ಸಂಗೀತೋತ್ಸವವನ್ನು ಉಳಿಸಿ ಬೆಳೆಸಿಕೊಂಸು ಹೋಗುವಂತೆ ಕರೆ ನೀಡಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಪಡ್ಲಪಾಲಯ್ಯ, ಕೋನಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಕಲಾವಿದರಾದ ಜಿ.ಎನ್.ಚಂದ್ರಪ್ಪ, ಹೆಚ್.ಎಂ.ಕರಿಬಸಪ್ಪ, ನಾಗರಾಜು, ರಾಜಶೇಖರ, ಮಾರುತಿ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿದ್ದರು.
ಕೆ.ತಿಪ್ಪೇಶ್ ನಿರೂಪಿಸಿದರು. ಎ.ಟಿ.ಪ್ರೀತಿ ವಂದಿಸಿದರು.