ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಕೇಸನ್ನು ವಾಪಾಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕ್ಯಾಬಿನೆಟ್ ನಲ್ಲಿ ಈ ನಿರ್ಧಾರ ಮಾಡಿದ್ದು, ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಡಿಕೆಶಿ ವಿರುದ್ಧ ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಗಳಿವೆ. ವಿಚಾರಣೆಗೆ ತಡೆ ನೀಡುವುದಕ್ಕೆ ಕೋರ್ಟ್ ಕೂಡ ನಿರಾಕರಿಸಿದೆ. ಆದರೆ ಕೇಸ್ ವಾಪಾಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದ್ದಾರೆ.
ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ಸಚಿವ ಸಂಪುಟ ವಾಪಾಸ್ ತೆಗೆದುಕೊಂಡಿರುವುದು ಪ್ರಜಾ ಪ್ರಭುತ್ವಕ್ಕೆ ಮಾಡಿದ ಅಪಮಾನ ಇದು. ಕಳ್ಳ ಎಂದಿದ್ದರು ಕಳ್ಳನೆ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಿಬಿಐ ಕೇಸ್ ಹಾಕಿದ್ದಕ್ಕೆ ಕಾರಣ, 23 ಕೋಟಿಯಿಂದ 163 ಕೋಟಿಗೆ ಹೋಗಿದೆ. ನ್ಯಾಯಾಲಯಕ್ಕೂ ಹೋದ್ರು. ಆದರೆ ಅಲ್ಲಿಯೂ ಅರ್ಜಿ ತಿರಸ್ಕಾರಗೊಂಡಿದೆ. ಡಿಕೆಶಿ ಆಸ್ತಿ ಹೆಚ್ಚಳವಾಗಿದ್ದು ಡಿಕೆಶಿಗೂ ಗೊತ್ತು, ಸಿಎಂಗೂ ಗೊತ್ತು ಎಂದು ಕಿಡಿಕಾರಿದ್ದಾರೆ.
ಸಂಸದ ಬಿವೈ ರಾಘವೇಂದ್ರ ವಾಗ್ದಾಳಿ ನಡೆಸಿದ್ದು, ಎಂಥಾ ಪ್ರವೃತ್ತಿ ಇದು. ಈಗಾಗಲೇ ಹೈಕೋರ್ಟ್ ಮುಂದುವರೆಸುವ ತೀರ್ಮಾನಕ್ಕೆ ಬಂದಿದೆ. ಏಕಾಏಕಿ ಕ್ಯಾಬಿನೆಟ್ ನಲ್ಲಿ ಈ ರೀತಿಯ ತೀರ್ಮಾನವಾಗುತ್ತೆ. ಈ ರೀತಿ ತೀರ್ಮಾನ ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.