
ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಡಿ ರೂಪಾ ಸೋಷಿಯಲ್ ಮೀಡಯಾ ಪೋಸ್ಟ್ ಗೆ ರಾಜ್ಯ ಸರ್ಕಾರ ಒಂದು ತಾರ್ಕಿಕ ಅಂತ್ಯ ತೋರಿಸಿದೆ. ಇಬ್ಬರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ರೋಹಿಣಿ ಸಿಂಧೂರಿ, ಡಿ ರೂಪಾ ಜೊತೆಗೆ ರೂಪಾ ಅವರ ಪತಿ ಮುನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿದೆ. ಆದ್ರೆ ಇಬ್ಬರು ಮಹಿಳಾ ಅಧಿಕಾರಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ.
ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಜಗಳ ರಾಜ್ಯದಲ್ಲಿ ಹೆಚ್ಚಾಗಿ ತಾರಕಕ್ಕೇರಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ ಮುಜುಗರವಾಗಿತ್ತು. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕಚೇರಿಗೆ ಹೋಗಿ, ಇಬ್ಬರು ದೂರಿನ ಮೇಲೆ ದೂರು ನೀಡಿದ್ದರು. ಇದೀಗ ಮುಜುಗರದಿಂದ ತಪ್ಪಿಸಿಕೊಳ್ಳಲು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

GIPHY App Key not set. Please check settings