ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಗಾದೆ ಮಾತೇ ಇದೆ. ರಾಗಿ ಹೆಚ್ಚಿನ ಪೌಷ್ಟಿಕಾಂಶ ಕೂಡ ನೀಡಿತ್ತೆ. ಇಂತ ಪೌಷ್ಟಿಕಾಂಶವುಳ್ಳ ಆಹಾರವನ್ನು ಮಕ್ಕಳಿಗೆ ನೀಡಲು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನಿರ್ಧಾರ ಮಾಡಿದ್ದಾರೆ. ಮಧ್ಯಾಹ್ನದ ಊಟದ ಜೊತೆಗೆ ರಾಗಿ ಗಂಜಿಯನ್ನು ನೀಡಲು ಸೂಚಿಸಿದ್ದಾರೆ.
ತಾಡೆಪಲ್ಲಿ ಕ್ಯಾಂಪ್ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಆನ್ಲೈನ್ ಮೂಲಕ ರಾಗಿ ಮಾಲ್ಟ್ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹಾಗೂ ವಾತಾವರಣವನ್ನು ಸುಧಾರಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಈಗ ಮಕ್ಕಳ ಪೌಷ್ಟಿಕಾಂಶದ ದೃಷ್ಟಿಯಿಂದ ರಾಗಿ ಮಾಲ್ಟ್ ಜಾರಿಗೆ ತಂದಿದ್ದಾರೆ.
ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಹೆಚ್ಚುವರಿ ಪೋಷಕಾಂಶವಿದೆ. ಹೀಗಾಗಿ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಗಿ ಬೆಸ್ಟ್ ಫುಡ್. ವಿದ್ಯಾರ್ಥಿಗಳಿಗೆ ಐದು ದಿನ ಮೊಟ್ಟೆ, ಚಿಕ್ಕಿ ಜೊತೆಗೆ ಈಗ ರಾಗಿ ಫುಡ್ ನೀಡಲಾಗುತ್ತದೆ ಎಂದು ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ. ಸರ್ಕಾರಿ ಮತ್ತು ಅನುದಾನಿ ಶಾಲೆಗಳ ಮಕ್ಕಳಿಗೆ ರಾಗಿ ಮಾಲ್ಟ್ ಸಿಗಲಿದೆ.